ಕೊಡಗು ಮೂಲದ ಈಕೆ ಆತ್ಮಹತ್ಯೆ ಗೆ ಶರಣಾದ ಯುವತಿ. ಆತ್ಮಹತ್ಯೆಯ ಕಾರಣ ಕೇಳಿದರೆ ನೀವು ದಂಗಾಗುವುದು ಗ್ಯಾರೆಂಟಿ

 

ad


ಇದು ಸೌಂದರ್ಯ ವೃದ್ಧಿಸಿಕೊಳ್ಳಲು ಹೋದ ಹೆಣ್ಣುಮಗಳೊಬ್ಬಳು ಅದರಿಂದಲೇ ಪ್ರಾಣ ಕಳೆದುಕೊಂಡ ಕತೆ. ಹೌದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೌಂದರ್ಯ ವರ್ಧನೆಯ ಉಪಾಯವೇ ಯುವತಿಯೊಬ್ಬಳ ಜೀವಕ್ಕೆ ಎರವಾಗಿದೆ. ಅತೀವ ಸೌಂದರ್ಯ ಪ್ರಜ್ಞೆಗೆ ಸಿಲುಕಿದ ಯುವತಿ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ.
ಕೊಡಗು ಮೂಲದ 19 ವರ್ಷದ ಜಿ. ನೇಗಾ ಗಂಗಮ್ಮ ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಈಕೆ ತಾನು ವಾಸವಾಗಿದ್ದ, ಪಿಜಿ ಸನಿಹದಲ್ಲಿರುವ ಬ್ಯೂಟಿ ಪಾರ್ಲರ್​ಗೆ ತೆರಳಿ ಹೇರ್​ ಸ್ಟ್ರೇಟನಿಂಗ್ ಮಾಡಿಸಿಕೊಂಡಿದ್ದಾಳೆ. ಆದರೇ,ಮಾಡಿಸಿಕೊಂಡ ಪರಿಣಾಮ ಕೂದಲು ಉದುರಲು ಆರಂಭವಾಗಿದೆ. ಇದರಿಂದ ನೊಂದ ಆಕೆ ಹೆತ್ತವರ ಬಳಿ ಸಮಸ್ಯೆ ಹೇಳಿಕೊಂಡು ಒಂದು ವರ್ಷ ಕಾಲೇಜಿಗೆ ಹೋಗೋದಿಲ್ಲ ಎಂದಿದ್ದಾಳೆ.
ಆದರೇ ಆಕೆಯ ಮನವೊಲಿಸಿದ ಹೆತ್ತವರು ಕಾಲೇಜಿಗೆ ತೆರಳುವಂತೆ ಸೂಚಿಸಿದ್ದಾರೆ. ಇದರಿಂದ ಮನನೊಂದ ನೇಹಾ ಗಂಗಮ್ಮ ಕೊಡಗಿನ ಪೊನ್ನಂಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನಿಟ್ಟೂರು ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನೇಹಾ ಗಂಗಮ್ಮ ಗೋಕುಲಂನ ಈಜಿಡೇ ಮಾಲ್​ ಪಕ್ಕದಲ್ಲಿರೋ ರೋಹಿಣಿ ಬ್ಯೂಟಿ ಝೋನ್​ನಲ್ಲಿ ಕೇಶಕ್ಕೆ ಚಿಕಿತ್ಸೆ ಪಡೆದಿದ್ದಳೆಂದು ಹೇಳಲಾಗುತ್ತಿದೆ.ಆದರೇ ಆಕೆಯ ಕೂದಲು ಉದುರಲು ಆರಂಭಿಸಿದಾಗ ಬ್ಯೂಟಿಪಾರ್ಲರ್​ನವರಿಗೆ ಹೇಳಿದ್ದಾರೆ. ಆದರೆ ಅವರು ನಿರ್ಲಕ್ಷ್ಯತೋರಿದ್ದಾರೆ ಎನ್ನಲಾಗಿದೆ. ಮೃತ ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಳು.
ಗೋಕುಲಂನಲ್ಲಿರುವ ಕೂರ್ಗ್ ಪಿಜಿಯಲ್ಲಿ ವಾಸವಾಗಿದ್ದಳು. ತಲೆಕೂದಲು ಉದುರುತ್ತಿರೋದರಿಂದ ತಲೆ ಕೆಡಿಸಿಕೊಂಡಿದ್ದ ಆಕೆ ಆಗಸ್ಟ್ 28 ರಂದು ಹೊರಗೆ ಹೋಗಿದ್ದವಳು ಮರಳಿ ಬಂದಿರಲಿಲ್ಲ. ಹೀಗಾಗಿ ಪಿಜಿ ಮಾಲೀಕ ಕಾರ್ಯಪ್ಪ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತ ಯುವತಿ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಒಟ್ಟಾರೆ ಹದಿ ಹರೆಯದ ಹೆಣ್ಮಕ್ಕಳು ಸೌಂದರ್ಯ ಇಮ್ಮಡಿಗೊಳಿಸಲು ಸಾಕಷ್ಟು ಕ್ರೇಜ್​ಗಳನ್ನು ಬೆಳೆಸಿಕೊಳ್ಳುತ್ತಿರುವುದೇ ಅವರ ಬದುಕಿಗೆ ಆಪತ್ತು ತರುತ್ತಿದೆ. ಇದಕ್ಕೆ ನೇಹಾ ಗಂಗಮ್ಮ ಪ್ರಕರಣ ಒಂದು ತಾಜಾ ಉದಾಹರಣೆ ಮಾತ್ರ. ಇನ್ನಾದರೂ ನಕಲಿ ಬ್ಯೂಟಿ ಪಾರ್ಲರ್​ಗಳ ಬಗ್ಗೆ ಹೆಣ್ಮಕ್ಕಳು ಎಚ್ಚೆತ್ತುಕೊಳ್ಳಬೇಕಿದೆ.