ಶಿರಾಡಿಘಾಟ್​ ಟ್ಯಾಂಕರ್​ ಪಲ್ಟಿ ಪ್ರಕರಣ- ಚಾಲಕನಿಗಾಗಿ ಮುಂದುವರಿದ ಶೋಧ- ಡಿಸಿ ರೋಹಿಣಿ ಕಾಲಿಗೆ ಬಿದ್ದು ಕಣ್ಣೀರಿಡುತ್ತಿದೆ ಕುಟುಂಬವರ್ಗ!

 

ಕಳೆದ ಐದು ದಿನಗಳ ಹಿಂದೆ ಭೂ ಕುಸಿತ ಸಂಭವಿಸಿದ್ರಿಂದ ಶಿರಾಡಿ ಘಾಟ್​ನಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಚಾಲಕ ನಾಪತ್ತೆಯಾಗಿದ್ದ. ಘಟನೆ ನಡೆದು ವಾರ ಕಳೆಯುತ್ತಾ ಬಂದ್ರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಪರಿಹಾರ ಕಾರ್ಯ ನಡೆಯುತ್ತಿದ್ದರೂ ಕೂಡ ಚಾಲಕನ ಮೃತದೇಹ ಪತ್ತೆಯಾಗಿಲ್ಲ.
ಹೀಗಾಗಿ ನೊಂದಿರುವ ಚಾಲಕ ಸಂತೋಷ ಪೋಷಕರು ಹಾಗೂ ಪತ್ನಿ ಸಂತೋಷನನ್ನು ಹುಡುಕಿಕೊಡುವಂತೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ಅಂಗಲಾಚಿದರು. ಅದರಲ್ಲೂ ಸಂತೋಷ ತಾಯಿ ಹಾಗೂ ಪತ್ನಿ ರೋಹಿಣಿ ಸಿಂಧೂರಿಯವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

 

ಇನ್ನು ರೋಹಿಣಿ ಸಿಂಧೂರಿ, ಅವರ ಕುಟುಂಬಸ್ಥರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರಾದರೂ ಸಂತೋಷ ಕುಟುಂಬಸ್ಥರು ಕಾರ್ಯಾಚರಣೆ ಸಮರ್ಪಕವಾಗಿಲ್ಲ ಎಂಬ ಅಸಮಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಬೇರೆ ಇಲಾಖೆಯಿಂದ ನುರಿತರನ್ನು ಕರೆಸಿ ಸಂತೋಷಗಾಗಿ ಹುಡುಕಾಟ ನಡೆಸಬೇಕೆಂದು ಒತ್ತಾಯಿಸಿದ್ದಾರೆ.