ಮತ್ತೊಮ್ಮೆ ಲಾಂಗ್​ ಹಿಡಿದ ಶಿವಣ್ಣ! ರುಸ್ತುಂನಲ್ಲಿ ಮನಸೆಳೆಯುತ್ತಿದೆ ಹ್ಯಾಟ್ರಿಕ್​ ಹೀರೋ ಖಾಕಿ ಖದರ್​!

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಖಾಕಿ ತೊಟ್ರೆ ಅದರ ಖದರ್​​ ಬೇರೆಯದ್ದೇ ಲೆವೆಲ್​​ನಲ್ಲಿ ಇರುತ್ತೆ. ಯಾಕಂದ್ರೆ ಶಿವಣ್ಣ ಖಾಕಿ ತೊಟ್ಟ ಸಿನಿಮಾ ಪ್ರೇಕ್ಷಕರಿಗೆ ಯಾವತ್ತೂ ಮೋಸ ಮಾಡೋದಿಲ್ಲ. ಅದಕ್ಕೆ ಇತ್ತೀಚೆಗಿನ ಎಕ್ಸಾಂಪಲ್​ ಟಗರು. ಈ ಸಿನಿಮಾದಲ್ಲಿ ಶಿವಣ್ಣ ಖಾಕಿ ತೊಟ್ಟು ಗರ್ಜಿಸಿದ್ದರು. ಸ್ಯಾಂಡಲ್​ವುಡ್​ನಲ್ಲಿ ಈ ಸಿನಿಮಾ ಬಿಗ್​ ಸಕ್ಸಸ್​ ಕಂಡಿತ್ತು.

ad

‘ಟಗರು’ ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿ ಕೊಂಡಿದ್ದ ಶಿವಣ್ಣ ‘ರುಸ್ತುಂ’ ಮೂಲಕ ಮತ್ತೆ ಖಾಕಿ ಧರಿಸಿ ಅಬ್ಬರಿಸಿದ್ದಾರೆ. ಇದೀಗ ‘ರುಸ್ತುಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹುರಿಮೀಸೆಯ ಪೊಲೀಸ್​ ಲುಕ್​ನಲ್ಲಿ ಶಿವಣ್ಣ ಮಿಂಚಿದ್ದಾರೆ. ಆ್ಯಕ್ಷನ್​ ಮೂಲಕ ಭರ್ಜರಿ ಕಿಕ್​ ಕೊಟ್ಟಿದ್ದಾರೆ. ರುಸ್ತುಂ’ ಪಕ್ಕಾ ಆಕ್ಷನ್ ಸಿನಿಮಾ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಹೊಡಿ ಬಡಿ ದೃಶ್ಯಗಳೇ ಹೈಲೆಟ್ಸ್. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಶಿವಣ್ಣ ಗನ್ ಜೊತೆಗೆ ಲಾಂಗ್ ಕೂಡ ಹಿಡಿದಿದ್ದಾರೆ.

ಜೊತೆಗೆ ಮಾಸ್​ ಡೈಲಾಗ್​ಗಳ ಅಬ್ಬರ ಇದೆ. ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ’ ಎಂದು ಶಿವಣ್ಣ ಹೇಳುವ ಡೈಲಾಗ್ ಈಗಾಗಲೆ ಟ್ರೆಂಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕೂಡ ಪೊಲೀಸ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವ ವಿವೇಕ್ ಟ್ರೈಲರ್ ನಲ್ಲೇ ಕನ್ನಡಿಗರ ಗಮನ ಸೆಳೆದಿದ್ದಾರೆ.

ಅಂದ್ಹಾಗೆ ‘ರುಸ್ತುಂ’ ಸಾಹಸ ನಿರ್ದೇಶಕ ರವಿ ವರ್ಮಾ ಸಾರಥ್ಯದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದ ಟ್ರೈಲರ್ ಮೂಲಕವೇ ಚಿತ್ರಾಭಿಮಾನಿಗಳ ಮನ ಗೆದ್ದಿರುವ ರವಿ ವರ್ಮಾ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟ್ರೇಲರ್​ನಲ್ಲಿ ಸಿನಿಮಾದ ಮೇಕಿಂಗ್ ಗಮನಸೆಳೆಯುತ್ತದೆ. ವಿವೇಕ್ ಇನ್ನು ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ರಚಿತಾ ರಾಮ್​​​, ಮಯೂರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್​ ಡೇಟ್​ ಎನೌನ್ಸ್​ ಆಗಲಿದೆ.