ಸ್ವಾಮೀಜಿಗಳನ್ನು ಹುಟ್ಟುಹಾಕುವ ಶಿವಯೋಗ ಮಂದಿರ ಜಂಗಮರ ಕೈಯಲ್ಲಿ, ಜಂಗಮೇತರರಿಗೆ ಅನ್ಯಾಯ… ಯಾಕೇ ಅಂತೀತಾ ಹಾಗಾದ್ರೆ ಈ ಸುದ್ದಿ ನೋಡಿ…

ಆಧ್ಯಾತ್ಮಿಕ ಕೇಂದ್ರ ಹಾಗೂ ಸ್ವಾಮೀಜಿಗಳನ್ನು ಹುಟ್ಟುಹಾಕುವ ಶಿವಯೋಗ ಮಂದಿರ ಜಂಗಮರ ಹಿಡಿದತ್ತದಲ್ಲಿಯಿದೆ ಹೀಗಾಗಿ ಜಂಗಮೇತರರಿಗೆ ಬಹಳ ಅನ್ಯಾಯವಾಗುತ್ತಿದೆ ಎಂದು ಸಿದ್ದಗಿರಿ ಕನೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.

 

ಶಿವಯೋಗ ಮಂದಿರ ಕೇವಲ ಜಂಗಮರಿಗೆ ಮಾತ್ರ ಸೀಮಿತವಾಗಿದೆ , ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಶಿವಯೋಗ ಮಂದಿರಯಿದೆ. ಶಿವಯೋಗಿ ಮಂದಿರ ಒಂದು ಉದ್ಯೋಗ ನೀಡುವ ಕಚೇರಿಯಂತೆ ಮಾಡಿದ್ದಾರೆ. ಮಠಗಳಲ್ಲಿ ಸನ್ಯಾಸಿಗಳ ಸಂಬಂಧಿಕರೇ ತುಂಬಿಕೊಂಡಿದ್ದಾರೆ. ಶಿವಯೋಗಿ ಮಂದಿರದಲ್ಲಿ ಕೇವಲ ಜಂಗಮರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಅಲ್ಲಿ
ಅಧ್ಯಯನ ಮಾಡಿದ ಜಂಗಮೇತರ ಸ್ವಾಮಿಗಳು ಎಷ್ಟು. ಜನ ಇದ್ದಾರೆ ಹೇಳಿ ಅಂತಾ ಕೇಳಿದ್ದಾರೆ.

ಹಾಗೇ ಶಿವಯೋಗ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಂಗಮರು ವಿದ್ಯಾಭ್ಯಾಸ ಮಾಡ್ತಾರೆ. ರಾಜ್ಯಾದ್ಯಂತ ಹೆಚ್ಚಿನ ಮಠಗಳಲ್ಲಿ ಜಂಗಮರು ಸ್ವಾಮಿಗಳಾಗಿದ್ದಾರೆ.
ನೂರು ವರ್ಷಗಳಲ್ಲಿ ಜಂಗಮೇತರ ಸ್ವಾಮಿಗಳ‌ ಕೇವಲ ನಾಲ್ಕು ಜನ ಅಂತಾ ಕೇಳುತ್ತಾ ಬಂದಿದ್ದಾರೆ.

ಲಿಂಗಾಯತ ಸಮಾಜದ ಸಹಕಾರದಿಂದ ಕಟ್ಟಿದ ಶಿವಯೋಗಿ ಮಂದಿರ ಜಂಗಮರ ಹಿಡಿತದಲ್ಲಿದೆ‌ ಹೀಗಾಗಿ ಶಿವಯೋಗ ಮಂದಿರದಲ್ಲಿ ಜಂಗಮೇತರರಿಗೆ ಬಹಳ ಅನ್ಯಾಯವಾಗುತ್ತಿದೆ. ಹಾಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವಿಶ್ವ ಲಿಂಗಾಯತ ಮಹಾಪರಿಷತ್ತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ..

ಸಮಾಜಕ್ಕೆ ಒಬ್ಬ ಒಳ್ಳೆಯ ಸನ್ಯಾಸಿಯನ್ನು ಕೊಡಬೇಕು ಎನ್ನುವುದು ನಮ್ಮ ನಿಲುವು, ಹೀಗಾಗಿ 300 ಜನ ಸ್ವಾಮೀಜಿಗಳು ಸೇರಿ ಸಮಾನ ಮನಸ್ಕ ಸನ್ಯಾಸಿಗಳ ವೇದಿಕೆ ಮಾಡಿಕೊಂಡಿದ್ದು ಜಾಗೃತಿ ಮೂಡಿಸಲಾಗುತ್ತಿದೆ.