ಬಿಎಂಟಿಎಫ್​ ಭ್ರಷ್ಟರಿಗೆ ಶಾಕ್​- ಹಣ ಪಡೆದು ಕ್ಲೀನ್​ಚಿಟ್​ ಕೊಟ್ಟವರಿಗೆ ಗೇಟ್​ಪಾಸ್​!

 

ad


ಭೂಗಳ್ಳರ ಪರ ನಿಂತ ಬಿಎಂಟಿಎಫ್​​ ಅಧಿಕಾರಿಗಳಿಗೆ ಕಂಟಕ ಎದುರಾಗಿದೆ. ಬಿಎಂಟಿಎಫ್​​ನಲ್ಲಿ ಬೇರು ಬಿಟ್ಟಿದ್ದ ಇನ್ಸ್​ಪೆಕ್ಟರ್​​, ಅಧಿಕಾರಿಗಳಿಗೆ ಶಾಕ್​​​ ಆಗುವಂತಹ ಆದೇಶ ಹೊರಬಿದ್ದಿದೆ.ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ಕ್ಲೀನ್​​ ಚಿಟ್​ ನೀಡಿದ್ದವರಿಗೆ ಗೇಟ್​ಪಾಸ್​ ಕೊಡಲು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

 

2016ರಲ್ಲಿ ಪ್ರವಾಹ ವೇಳೆ ರಾಜಕಾಲುವೆ ಒತ್ತುವರಿ ತನಿಖೆಗೆ ಸಿಎಂ ಸಿದ್ದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಬಿಎಂಟಿಎಫ್​ಗೆ ದೂರು ನೀಡಿದ್ದರು. ಮಹದೇವಪುರ, ಬೊಮ್ಮನಹಳ್ಳಿ ವಲಯದ ಹಲವು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಆದ್ರೆ ಬಿಎಂಟಿಎಫ್​​​ ತನಿಖಾಧಿಕಾರಿ ದೀಪಕ್​​​​ ಒತ್ತುವರಿ ಮಾಡಿದ್ದ ಬಿಲ್ಡರ್ಸ್​, ಒತ್ತುವರಿದಾರರು ಮತ್ತು ಅಕ್ರಮಕ್ಕೆ ಸಾಥ್​​ ಕೊಟ್ಟಿದ್ದ ಅಧಿಕಾರಿಗಳಿಂದ ಹಣ ಪಡೆದು ಬಿ ರಿಪೋರ್ಟ್ ಸಲ್ಲಿಸಿದ್ದರು.

 

ಇದೇ ಸಂಬಂಧ ಸಾಮಾಜಿಕ ಹೋರಾಟಗಾರ ಸಾಯಿದತ್ತಾ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿ ಹಲವು ವರ್ಷಗಳಿಂದ ಬಿಎಂಟಿಎಫ್​ನಲ್ಲಿ ಬೀಡು ಬಿಟ್ಟಿರೋ ಅಧಿಕಾರಿಗಳ ವರ್ಗ ಮಾಡುವಂತೆ ಮತ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದೀಗ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್​.ಎನ್​​.ಪ್ರಭಾಕರ್​​ ಕೂಡ್ಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ​ ಬಿಬಿಎಂಪಿ ಆಯುಕ್ತ ಮತ್ತು ಬಿಎಂಟಿಎಫ್​​ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.