ರೈತರ ಹಣ ಬಾಕಿ ಉಳಿಸಿಕೊಂಡ ಕಂಪನಿಗಳಿಗೆ ಶಾಕ್​! ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಡಿಸಿ ಆದೇಶ !!

ಕಬ್ಬು ಬೆಳೆಗಾರರನ್ನು ಸತಾಯಿಸುತ್ತಿದ್ದ ಸಕ್ಕರೆ ಕಂಪನಿಗಳ ಮಾಲೀಕರಿಗೆ ಸರ್ಕಾರ ಸಖತ್ ಶಾಕ್ ನೀಡಿದೆ. ಸಿಎಂ ಎಚ್ಡಿಕೆ ವಾರ್ನಿಂಗ್​ ಬೆನ್ನಲ್ಲೇ, ಫಿಲ್ಡ್​ಗಿಳಿದಿರುವ ಬೆಳಗಾವಿ ಡಿಸಿ ರೈತರ ದುಡ್ಡು ಬಾಕಿ ಉಳಿಸಿಕೊಂಡಿರುವ 9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ಹೊರಡಿಸಿದ್ದಾರೆ.

ad


ಕಬ್ಬು ಬೆಳೆಗಾರರಿಂದ ಬೆಳೆ ಖರೀದಿಸುವ ಸಕ್ಕರೆ ಕಂಪನಿಗಳು ಹಣ ಪಾವತಿಸದೇ ಬಾಕಿ ಉಳಿಸಿಕೊಂಡು ಸತಾಯಿಸುತ್ತಿದ್ದಾರೆ. ಹೀಗಾಗಿ ಸಕ್ಕರೆ ಕಂಪನಿಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಸರ್ಕಾರ ದಿಟ್ಟ ಕ್ರಮಕೈಗೊಂಡಿದ್ದು, ಭೂಕಂದಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಎಸ್​.ಬಿ.ಬೊಮ್ಮನಹಳ್ಳಿ ತಹಶೀಲ್ದಾರ್​ಗೆ ಆದೇಶ ಹೊರಡಿಸಿದ್ದಾರೆ.


ಪ್ರಸಕ್ತ ಹಂಗಾಮಿನ ಎಫ್​ಆರ್​​​ಪಿ ದರ ಪಾವತಿ ಮಾಡದ ಖಾನಾಪುರದ ಬಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ, ರೇಣುಕಾ ಶುಗರ್ಸ್​, ಗೋಕಾಕ ಶುಗರ್ಸ್​,ಸೋಮೇಶ್ವರ ಸಹಕಾರಿ ಕಾರ್ಖಾನೆ, ಕೃಷ್ಣಾ ಶುಗರ್ಸ್,ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆ,ಉಮೇಶ್ ಕತ್ತಿ ಮಾಲಿಕತ್ವದ ವಿಶ್ವರಾಜ ಶುಗರ್ಸ್​,ಶ್ರೀಮಂತ ಪಾಟೀಲ ಒಡೆತನದ ಅಥಣಿ ಶುಗರ್ಸ್,​-ಉಗಾರ ಶುಗರ್ಸ್​ ಸೇರಿದಂತೆ 9 ಕಂಪನಿಗಳ ಮೇಲೆ ಕ್ರಮಕ್ಕೆ ನೋಟಿಸ್​ ನೀಡಲಾಗಿದೆ.