ತಾರಕಕ್ಕೇರಿದ ಸಿದ್ಧರಾಮಯ್ಯ ವರ್ಸಸ್​​ ಎಚ್​ ವಿಶ್ವನಾಥ್​ ಫೈಟ್​​​! ಮೈತ್ರಿ ಕ್ಲೈಮ್ಯಾಕ್ಸ್​​ಗೆ ನಡಿತಿದ್ಯಾ ಕ್ಷಣಗಣನೆ?!

ಸದಾಕಾಲ ಮಾಜಿ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಹಳ್ಳಿಹಕ್ಕಿ, ಜೆಡಿಎಸ್​ ರಾಜ್ಯಾಧ್ಯಕ್ಷ ಮತ್ತೊಮ್ಮೆ ಸಿದ್ಧು ವಿರುದ್ಧ ಗುಡುಗಿದ್ದು, ಸಿದ್ಧರಾಮಯ್ಯ ಅಷ್ಟೊಂದು ಜನಪ್ರಿಯ ಮುಖ್ಯಮಂತ್ರಿಯಾಗಿದ್ದರೇ ಯಾಕೆ 120 ಇದ್ದೋರು 79 ಕ್ಕೆ ಯಾಕೆ ಇಳಿದ್ರು ಎಂದು ಪ್ರಶ್ನಿಸುವ ಮೂಲಕ ಮತ್ತೊಮ್ಮೆ ಸಿದ್ಧು ವರ್ಸಸ್​​ ವಿಶ್ವನಾಥ್​ ಯುದ್ಧಕ್ಕೆ ನಾಂದಿ ಹಾಡಿದ್ದಾರೆ.

ad

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ, ಮಾಜಿ ಸಿಎಂ ಸಿದ್ಧರಾಮಯ್ಯ, ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಬಗ್ಗೆ ಪ್ರಸ್ತಾಪಿಸಿರೋದು ಹಾಗೂ ಯೋಜನೆಗಳ ಬಗ್ಗೆ ಮಾತನಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಸಿದ್ಧರಾಮಯ್ಯನವರು ಬಹಳ ಚೆನ್ನಾಗಿ ಆಡಳಿತ ಮಾಡಿದ್ದರೇ, 125 ಇದ್ದಿದ್ದು, 79 ಯಾಕೆ ಆಯ್ತು. ಆದರಿಂದ ಯಾಕೆ ಅವಸರ ಮಾಡ್ತಿರಾ ಸ್ವಾಮಿ? ಇನ್ನು ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿತಾರೆ. ಅಷ್ಟೊತ್ತಿಗೆ ನೀವು ಸಿದ್ಧ ಪ್ರಸಿದ್ಧರಾಗಿ. ಮುಂದೆ ನೋಡೋಣ ಇನ್ನು ನಾಲ್ಕು ವರ್ಷ ಆದ ಮೇಲೆ ಜನ ಯಾರಿಗೆ ಆಶಿರ್ವಾದ ಮಾಡ್ತಾರೆ ಅಂತ ಎನ್ನುವ ಮೂಲಕ ಸಿದ್ಧರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಇನ್ನು ವಿಶ್ವನಾಥ ಈ ಹೇಳಿಕೆಗೆ ಕಲ್ಬುರ್ಗಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ವಿಶ್ವನಾಥ ಅವರ ಮಾತಿಗೆ ನಾನು ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತೇನೆ ಎಂದರು. ಅಷ್ಟೇ ಅಲ್ಲ ಎಚ್.ವಿಶ್ವನಾಥ್ ಕೂಡ ಎಸ್​ಎಂ ಕೃಷ್ಣ ಕಾಲದಲ್ಲಿ ಮಂತ್ರಿಯಾಗಿದ್ದರು. ಅವಾಗ ಅಷ್ಟೊಳ್ಳೆ ಬಹುಮತ ಇದ್ದವರು 65 ಕ್ಕೆ ಯಾಕೆ ಬಂದ್ರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

 

ಕಳೆದ ಚುನಾವಣೆಯಲ್ಲಿ ಬಿಜೆಪಿಯವರ ಅಪಪ್ರಚಾರದಿಂದ ನಮಗೆ ಜಾಸ್ತಿ ಸೀಟು ಬರಲಿಲ್ಲ. ಅದೆಲ್ಲ ವಿಶ್ವನಾಥಗೆ ಗೊತ್ತಿಲ್ಲ. ಪಾಪ ವಿಶ್ವನಾಥಗೆ ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚಿನಿಂದ ಮಾತಾಡ್ತಾನೆ ಅವರ ಮಾತಿಗೆಲ್ಲ ಕಿಮ್ಮತ್ತು ಕೊಡಬೇಡಿ. ಹಳೆದು ಹೊಸದು ಅಲ್ಲ ಯಾವಾಗಲು ಅವರಿಗೆ ನನ್ನ ಮೇಲೆ ಹೊಟ್ಟೆ ಕಿಚ್ಚಿದೆ ಎಂದು ಸಿದ್ದು ತಿರುಗೇಟು ನೀಡಿದ್ದಾರೆ.


ಒಟ್ಟಿನಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರ ನಡುವಿನ ವಾರ್ ತಾರಕಕ್ಕೇರಿದಂತಾಗಿದ್ದು, ಈ ಜಗಳದ ಎಫೆಕ್ಟ್​​ ದೋಸ್ತಿ ಸರ್ಕಾರದ ಮೇಲೆಯೂ ಆಗಲಿದ್ದು, ಮೈತ್ರಿ ಕ್ಲೈಮ್ಯಾಕ್ಸ್​ಗೆ ಕ್ಷಣಗಣನೆ ನಡಿತಿದ್ಯಾ ಎಂಬ ಅನುಮಾನವೂ ಕೂಡ ಸೃಷ್ಟಿಯಾಗಿದೆ.

https://www.facebook.com/btvnewslive/videos/359636634673392/?t=1

https://www.facebook.com/btvnewslive/videos/475483353015095/?t=1