ಸಿದ್ಧರಾಮಯ್ಯನವರಿಗೆ ಮಾನ ಮರ್ಯಾದೆ ಇದ್ದರೇ ರಾಜೀನಾಮೆ ಕೊಡಲಿ! ಮಾಜಿ ಡಿಸಿಎಂ ಆರ್.ಅಶೋಕ್ ಗುಡುಗು!!

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್​ ವಿರುದ್ಧ ಮಾಜಿ ಡಿಸಿಎಂ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ಧರಾಮಯ್ಯನವರನ್ನು ಟೀಕಿಸಿದ ಆರ್.ಅಶೋಕ್​, ಅವರಿಗೆ ಮಾನ ಮರ್ಯಾದೆ ಇದ್ದರೇ ತಕ್ಷಣವೇ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.


ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸೋತಾಗ ರಾಮಕೃಷ್ಣ ಹೆಗಡೆಯಂತಹ ನಾಯಕರು ರಾಜೀನಾಮೆ ನೀಡಿದ್ದರು. ಇವತ್ತು ಕಾಂಗ್ರೆಸ್​ ಸೋತಿದೆ. ಹೀಗಾಗಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ಧರಾಮಯ್ಯನವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದರು.

ಮೈತ್ರಿ ಸರ್ಕಾರ ಒಂದು ಮುಳುಗುವ ಹಡಗು ಎಂದ ಆರ್.ಅಶೋಕ್, ಒಂದು ವರ್ಷದ ಹಿಂದೆ ಮೈತ್ರಿ ಹಡಗಿಗೆ ರಮೇಶ್ ಜಾರಕಿಹೊಳಿಯಿಂದ ಒಂದು ತುತೂ ಬಿದ್ದಿತ್ತು. ಈ ಹಡಗು ಸಂಪೂರ್ಣ ಮುಳುಗುತ್ತಿದೆ ಎಂದು ಟೀಕಿಸಿದರು. ಅಲ್ಲದೇ ಇವತ್ತೇ ಚುನಾವಣೆ ನಡೆದರೂ ನಾವು 177 ಕ್ಷೇತ್ರ ಗೆಲ್ಲುತ್ತೇವೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.