ಸಿಲಿಕಾನ ಸಿಟಿ ರಸಿಕರಿಗೆ ಹಾಟ್ ಬೆಡಗಿ ಸನ್ನಿ ನೋಡೋ ಭಾಗ್ಯವಿಲ್ಲ – ಈ ಭಾರಿಯೂ ಸನ್ನಿ ಡ್ಯಾನ್ಸಗೆ ಕನ್ನಡಪರ ಸಂಘಟನೆ ವಿರೋಧ!

 

ad


ಸಿಲಿಕಾನ ಸಿಟಿಯ ರಸಿಕರಿಗೆ ನಟಿ ಸನ್ನಿಲಿಯೋನರನ್ನು ಪ್ರತ್ಯಕ್ಷವಾಗಿ ನೋಡೋ ಭಾಗ್ಯವೇ ಇದ್ದಂತಿಲ್ಲ. ಹೌದು 1028 ರ ಹೊಸ ವರ್ಷಾಚರಣೆಗೆ ಬಂದು ಸಿಲಿಕಾನ ಸಿಟಿಯ ಜನರ ಕಣ್ಮನ ತಣಿಸಬೇಕಿದ್ದ ನಟಿ ಸನ್ನಿ ಲಿಯೋನ ಈ ವರ್ಷವೂ ಬರೋದು ಅನುಮಾನ. ಯಾಕೆ ಅಂದ್ರಾ ಈ ಭಾರಿಯೂ ನವೆಂಬರ್​ 3 ರಂದು ನಗರದಲ್ಲಿ ಆಯೋಜನೆಯಾಗಿದ್ದ ಸನ್ನಿಲಿಯೋನ್​ ಹಾಟ್​-ಹಾಟ್​ ಡ್ಯಾನ್ಸ್​ ಪ್ರೋಗ್ರಾಂ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಎಲ್ಲವೂ ಆಯೋಜಕರು ಅಂದುಕೊಂಡಂತೆ ಆಗಿದ್ದರೇ 2018 ರ ಹೊಸ ವರ್ಷದಂದು ಸಿಲಿಕಾನ ಸಿಟಿ ಸನ್ನಿ ಲಿಯೋನ್ ಮೋಡಿಯಲ್ಲಿ ಕಳೆದ ಹೋಗಬೇಕಿತ್ತು. ಆದರೆ ಕನ್ನಡಪರ ಸಂಘಟನೆಗಳ ವಿರೋಧಕ್ಕೆ ಮಣಿದ ನಗರ ಪೊಲೀಸ್ ಇಲಾಖೆ ಸನ್ನಿ ಲಿಯೋನ ಆಗಮನಕ್ಕೆ ಬ್ರೇಕ್ ಹಾಕಿತ್ತು. ಇದೀಗ ನವೆಂಬರ್​ 3 ರಂದು ದಿ ಟೈಮ್ಸ್ ಕ್ರಿಯೇಷನ್ಸ್ ಸಂಸ್ಥೆ ಬಾಲಿವುಡ್​ ಮ್ಯೂಸಿಕ್​ ನೈಟ್​ ಕಾರ್ಯಕ್ರಮ ಆಯೋಜಿಸಿದೆ.

ಇದರಲ್ಲಿ ಸನ್ನಿ ಲಿಯೋನ ಮೂರು ಹಾಡುಗಳಿಗೆ ಸಖತ್ ಸ್ಟೆಪ್​ ಹಾಕಲಿದ್ದಾರೆ. ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ಮಾನ್ಯತಾ ಟೆಕ್​ ಪಾರ್ಕ್​ನ ವೈಟ್​ ಆರ್ಚಿಡ್​ನಲ್ಲಿ ಕಾರ್ಯಕ್ರಮ ನಡೆಯಲಿದೆ.
ಆದರೇ ಈ ಭಾರಿಯೂ ಕಾರ್ಯಕ್ರಮಕ್ಕೆ ಕನ್ನಡ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕಾರ್ಯಕ್ರಮ ಕನ್ನಡಪರವಾಗಿದ್ದರೇ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಸಂಸ್ಕೃತಿಗೆ ಅಪಚಾರವಾಗುವಂತಿದ್ದರೇ ರಾಜ್ಯವ್ಯಾಪಿ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ ಭಾರಿಯೂ ಹಾಟ್ ಬೆಡಗಿ ಸನ್ನಿ ಲಿಯೋನ ಪ್ರಿಯರಿಗೆ ನಿರಾಸೆ ಕಾದಿದೆ ಅನ್ನಿಸ್ತಿದೆ.