ಅರುವತ್ತೆಂಟು ವರ್ಷ, ಹನ್ನೊಂದು ಮಕ್ಕಳು – ಇನ್ನೂ ಗಟ್ಟಿಗನಿದ್ದೀನಿ ಎಂದ ಸಿಎಂ ಇಬ್ರಾಹಿಂ !! ಸಿದ್ದರಾಮಯ್ಯ ಜೊತೆ ಹೋಗದೇ ಇರೋದಕ್ಕೆ ಕಾರಣವೇನು ಗೊತ್ತಾ ?

ನನಗೀಗ 68 ವರ್ಷ. ಹನ್ನೊಂದು ಮಕ್ಕಳಿದ್ದಾರೆ. ಇನ್ನೂ ಗಟ್ಟಿ ಇದ್ದೀನಿ. ಆದ್ದರಿಂದ ಶಾಂತಿವನಕ್ಕೆ ನಾನು ಹೊಗೋದಿಲ್ಲ ಎಂದಿದ್ದಾರೆ ಸಿ ಎಂ ಇಬ್ರಾಹಿಂ !

ಸದಾ ತನ್ನ ಮಾತುಗಳಲ್ಲಿ ಸೂಫಿ ಸಂತರು, ಬಸವಣ್ಣರ ವಚನಗಳನ್ನು, ಹಾಸ್ಯಗಳನ್ನು ಉಲ್ಲೇಖಿಸಿ ಮಾತನಾಡುವ ಸಿ ಎಂ ಇಬ್ರಾಹಿಂ ಇಂದು ವಿಧಾನಪರಿಷತ್ ನಲ್ಲಿ ಮಾಡಿದ ಭಾಷಣ ಎಲ್ಲರ ನಗುಗೆ ಕಾರಣವಾಯ್ತು. ಸಿಎಂ ಇಬ್ರಾಹಿಂ ಭಾಷಣವನ್ನು ಕೇಳಿದ ಎಚ್ ಡಿ ಕುಮಾರಸ್ವಾಮಿ ಮತ್ತು ಸಭಾ ನಾಯಕಿ ಜಯಮಾಲ ಬಿದ್ದು ಬಿದ್ದು ನಕ್ಕರು. ಚುನಾವಣಾ ಸುಧಾರಣೆ ಎಂದರೆ ಮತ್ತೆ ಬ್ಯಾಲೆಟ್ ಪೇಪರ್ ಬರಬೇಕು. ಅದು ಯಾಕೆ ಬಿಜೆಪಿಗೆ ಮಿಷಿನ್ ಅಂದ್ರೆ ಪ್ರೀತಿ ? ಓಟು ಹಾಕುವಾಗ ಕುಯಿಂ ಅಂತ ಶಬ್ದ ಬರದೇ ಇದ್ದರೆ ಓಟು ಹಾಕೋಕೆ ಆಗಲ್ವಾ ? ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದರು.

ಮತ್ತೆ ಯಾವಾಗ ಶಾಂತಿವನ ಹೋಗ್ತೀರಿ ಎಂದು ಬಿಜೆಪಿಯ ನಾರಾಯಣಸ್ವಾಮಿ ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಿದ ಸಿಎಂ ಇಬ್ರಾಹಿಂ, ನನಗ್ಯಾಕೆ ಶಾಂತಿವನ ? ನನಗೀಗ ಅರುವತ್ತೆಂಟು ವರ್ಷ. ಹನ್ನೊಂದು ಮಕ್ಕಳಾದರೂ ಇನ್ನೂ ಗಟ್ಟಿಗನಿದ್ದೀನಿ ಎಂದರು.

ನಾನು ಈಗೀಗ ಚುನಾವಣಾ ಭಾಷಣಕ್ಕೆ ಹೋಗ್ತಾ ಇಲ್ಲ. ಸಿದ್ದರಾಮಯ್ಯ ಕರೆದ್ರೂ ಭಾಷಣ ಮಾಡಲು ಹೋಗಿಲ್ಲ. ಯಾಕಯ್ಯ ಬರ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ದಿನದಲ್ಲಿ ಮೂರು ಸಮಾವೇಶ ಇದ್ದರೆ ಮೊದಲ ಸಮಾವೇಶಕ್ಕೆ ಬಂದ ಜನವೇ ಮೂರೂ ಸಮಾವೇಶದಲ್ಲಿ ಇರ್ತಾರೆ. ಈಗ ಬಂದ ಜನಗಳು ಇರೋದಿಲ್ಲ. ತಂದ ಜನರಷ್ಟೇ ಇರ್ತಾರೆ. ಇದು ಎಲ್ಲಾ ಪಕ್ಷಗಳ ಹಣೆಬರಹ ಎಂದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.