ಆಸ್ತಿಗಾಗಿ ಅಪ್ಪನ ಕಣ್ಣು ಕಿತ್ತ ಮಗ- ಇದು ಮಾದಕವ್ಯಸನಿ ಮಗನೊಬ್ಬನ ವಿಕೃತ ಕೃತ್ಯ!

ಅಪ್ಪನೇ ಮಗನ ಮೊದಲ ಹಿರೋ ಅಂತಾರೆ. ಆದರೇ ಇಲ್ಲೊಬ್ಬ ಪಾಪಿ ಜಗತ್ತು ನೋಡೋಕೆ ಕಲಿಸಿದ ತಂದೆಯ ಕಣ್ಣುಗಳನ್ನೇ ಕಿತ್ತು ಕೌರ್ಯ ಮೆರೆದಿದ್ದಾನೆ. ಇಂತಹದೊಂದು ಹೃದಯಹೀನ ಕೃತ್ಯ ನಡೆದಿರೋದು ಬೆಂಗಳೂರಿನ ಜೆಪಿನಗರದಲ್ಲಿ.

ad


 

ಜೆಪಿ ನಗರದ ಶಾಕಾಂಬರಿ ನಗರದ ನಿವಾಸಿಯಾಗಿದ್ದ ಪರಮೇಶ್(66)ಕಣ್ಣು ಕಳೆದು ಕೊಂಡ ದುರ್ದೈವಿ ತಂದೆ.ಪರಮೇಶ್ ರ ಮೂರು ಜನ ಮಕ್ಕಳಲ್ಲಿ ಹಿರಿಯ ಮಗ ಚೇತನ್ ಅಭಿಷೇಕ್ ತಂದೆಯ ಕಣ್ಣು ಕಿತ್ತ ಪಾಪಿ ಪುತ್ರ.ಸರ್ಕಾರಿ ಉದ್ಯೋಗದಿಂದ ನಿವೃತ್ತರಾಗಿದ್ದ ಪರಮೇಶ್ ಚೆನ್ನಾಗಿ ಆಸ್ತಿ ಸಹ ಹೊಂದಿದ್ರು.ಇದ್ದ ಆಸ್ತಿಯನ್ನು ಮಕ್ಕಳಿಗೆ ಹಂಚಿ ಇವರ ಪಿತ್ರಾರ್ಜಿತ ಮನೆಯಲ್ಲಿ ವಾಸವಿದ್ರು.ಜೊತೆಯಾಗಿದ್ದ ಮಡದಿ ಸಹ ಒಂದು ತಿಂಗಳ ಹಿಂದೆ ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ರು.ಹೆಂಡತಿ ಸತ್ತ ನೋವಿನಲ್ಲಿದ್ದವರಿಗೆ ಮಗನೆ ಜೀವನ ಪರ್ಯಂತ ಜಗತ್ತನ್ನೆ ನೋಡದ ರೀತಿ ಮಾಡಿದ್ದಾನೆ.

ಮಗ ಚೇತನ್ ಯಾವುದೆ ದುಡಿಮೆ ಇಲ್ಲದೆ ಪರೋಡಿಯಾಗಿದ್ದ.ಗಾಂಜಾ.ಪಬ್.ಬಾರ್ .ಹುಡಿಗೀರ ಜೊತೆ ಶೋಕಿ ಮಾಡೋದೆ ಈತನ ಕಯಾಲಿ.ದುಡ್ಡಿನ ಅವಶ್ಯಕತೆ ಇದ್ದ ಚೇತನ್ ಗೆ ತಂದೆ ಇದ್ದ ಮನೆ ಮೇಲೆ ಕಣ್ಣು ಬಿದ್ದಿತ್ತು.ದಿನಾಲೂ ಮನೆಗೆ ಅಪ್ಪನಿಗೆ ಹೊಡೆದು ಮನೆ ನೀಡುವಂತೆ ಚಿತ್ರಹಿಂಸೆ ನೀಡ್ತಿದ್ದ.ಆದ್ರೆ ನಿನ್ನೆ ಮಧ್ಯಾಹ್ನ ಮನೆಗೆ ಬಂದವನು ಅಪ್ಪನ ಮೇಲೆ ಮನಬಂದಂತೆ ತಳಿಸಿ ಅಪ್ಪನ ಎರಡೂ ಕಣ್ಣು ಗಳನ್ನು ಕಿತ್ತು ಹಾಕಿದ್ದ.ನಂತರ ಕೈ ತೊಳೆದುಕೊಂಡು ಪರಾರಿಯಾಗಲು ಯತ್ನಿಸಿದ್ದ.ಅಪ್ಪನ ಚೀರಾಟ ಕೇಳಿ ಓಡಿ ಬಂದ ಸ್ಥಳಿಯರು ಚೇತನ್ ನನ್ನು ಹಿಡಿದು ಜೆಪಿ ನಗರ ಪೊಲೀಸ್ರಿಗೆ ಒಪ್ಪಿಸಿದ್ರು.ಕಣ್ಣಿಂದ ತೀವ್ರ ರಕ್ತ ಸ್ರಾವವಾಗುತ್ತಿದ್ದ ಪರಮೇಶ್ ರನ್ನು ಸ್ಥಳಿಯ ಪ್ರಭಾ ಕಣ್ಣಿನ ಆಸ್ಪತ್ರೆ ದಾಖಲಿಸಲಾಯ್ತು.ಆದ್ರೆ ಕಣ್ಣು ಕಿತ್ತು ಹೊರಗೆ ಬಿದ್ದಿದ್ದರಿಂದ ಮತ್ತೆ ದೃಷ್ಟಿ ಮರಳಿಸೋದು ಕಷ್ಟ ಅಂತ ವೈದ್ಯರು ತಿಳಿಸಿದ್ದಾರೆ.

ಮಗನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ ಸ್ಪೋಟಕ ಹೇಳಿಕೆ ನೀಡಿದ್ದಾನೆ.ಅಪ್ಪನನ್ನು ಕೊಲ್ಲಲು ಬಂದಿದ್ದೆ ಆದ್ರ ಸ್ಥಳಿಯರು ಬಂದಿದ್ದರಿಂದ ಬಿಟ್ಟೆ ಎಂದಿದ್ದಾನೆ.ಈತನ ಹೇಳಿಕೆಗೆ ಪೊಲೀಸರೆ ಶಾಕ್ ಆಗಿದ್ದಾರೆ.ಕೇವಲ ಆಸ್ಥಿಗಾಗಿ ಹೆತ್ತ ಅಪ್ಪನನ್ನೆ ಕೊಲ್ಲಲು ಮುಂದಾಗಿದ್ದ ಈತ ಎಂತಾ ಕ್ರೂರಿ ಅಲ್ವ.ಜನ್ಮ ಕೊಟ್ಟ ತಪ್ಪಿಗೆ ಮಗನಿಂದಲೆ ಅಪ್ಪ ಕಣ್ಣು ಕಳೆದುಕೊಂಡಿದ್ದು ಮಾತ್ರ ದುರಂತವೆ ಸರಿ.