ಹೆಚ್ ಡಿ ದೇವೇಗೌಡರಿಗೆ ಕರೆ ಮಾಡಿದ ಸೋನಿಯಾ ಗಾಂಧಿ !! ಮೇ 23 ರಂದು ಸಭೆ ಸೇರಲಿದ್ದಾರೆ ಬಿಜೆಪಿ ವಿರೋಧಿಗಳು !!

ಮೇ 23 ರಂದು ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ದಿನ. ಅಂದು ಫಲಿತಾಂಶ ಪ್ರಕಟವಾದ ಬಳಿಕ ಯಾವ ಪಕ್ಷ ಸರಕಾರ ರಚಿಸುತ್ತದೆ ಎಂಬುದು ನಿರ್ಧಾರವಾಗುತ್ತದೆ. ಆದರೆ ಕಾಂಗ್ರೆಸ್ ಈಗಲೇ ಅಲರ್ಟ್ ಆಗಿದ್ದು, ಫಲಿತಾಂಶದ ದಿನವೇ ಬಿಜೆಪಿ ವಿರೋಧಿ ಪಕ್ಷಗಳ ಸಭೆ ನಡೆಸಲಿದೆ. ಸೋನಿಯಾ ಗಾಂಧಿ ಇಂತದ್ದೊಂದು ಜಾಣತನ ಮೆರೆದಿದ್ದು, ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡರಿಗೆ ಕರೆ ಮಾಡಿ ದೆಹಲಿ ಸಭೆಗೆ ಆಹ್ವಾನಿಸಿದ್ದಾರೆ.

ad

ಲೋಕಸಮರದ ಕೊನೆ ಹಂತದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅಖಾಡಕ್ಕಿಳಿದಿದ್ದಾರೆ. ಮೇ 23ರಂದು ಬಿಜೆಪಿ ವಿರೋಧಿ ಪಕ್ಷಗಳ ಸಭೆಗೆ ಕಾಂಗ್ರೆಸ್ ನಾಯಕಿ ಕರೆದಿದ್ದಾರೆ. ಎಲ್ಲಾ ಪ್ರತಿಪಕ್ಷಗಳ ನಾಯಕರನ್ನು ಆಹ್ವಾನಿಸಿ ಪತ್ರ ಬರೆದಿರುವ ಸೋನಿಯಾ ಗಾಂಧಿ, ಲೋಕಸಭಾ ಫಲಿತಾಂಶದಂದೇ ಮಹತ್ವದ ಸಭೆ ನಡೆಸಲಿದ್ದಾರೆ. ಯುಪಿಎ ಜೊತೆಗಿರದ ಟಿಎಂಸಿ, ಬಿಜೆಡಿ, ವೈಎಸ್ಆರ್ ಕಾಂಗ್ರೆಸ್ಗೂ ಆಹ್ವಾನಿಸಲಾಗಿದ್ದು, ಎನ್ಡಿಎಗೆ ಬಹುಮತ ದೊರೆಯದಿದ್ದರೆ ಸರ್ಕಾರ ರಚನೆಗೆ ಸೋನಿಯಾ ಗಾಂಧಿ ಬಿಗ್ ಪ್ಲಾನ್ ಮಾಡಿದ್ದಾರೆ.

ಎನ್ ಡಿಎ ಗೆ ಸರಕಾರ ರಚನೆಗೆ ಬೇಕಾಗುವಷ್ಟು ಸೀಟು ಬರದೇ ಇದ್ದಲ್ಲಿ ಯುಪಿಎ ಜೊತೆಗಿದ್ದ ಪ್ರಾದೇಶಿಕ ಪಕ್ಷಗಳನ್ನು ಮೋದಿ ಸೆಳೆಯುವ ಸಾಧ್ಯತೆ ಇದೆ. ಆದ್ದರಿಂದ ಫಲಿತಾಂಶ ಪ್ರಕಟವಾಗುವ ದಿನವೇ ಎಲ್ಲಾ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳು ಒಟ್ಟಿಗಿದ್ದರೆ ಅನುಕೂಲ ಎಂಬ ಜಾಣತನ ಸೋನಿಯಾ ಗಾಂಧಿಯದ್ದು. ಎನ್ ಡಿಎ ಮತ್ತು ಯುಪಿಎ ಸಣ್ಣಪುಟ್ಟ ಪಕ್ಷಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದರೆ ಒಂದೊಂದು ಗಂಟೆಯೂ ಅತ್ಯಂತ ಪ್ರಮುಖವಾಗುತ್ತದೆ. ಫಲಿತಾಂಶ ಪ್ರಕಟವಾದ ಕೂಡಲೇ ಪಕ್ಷಗಳ ಮುಖ್ಯಸ್ಥರ ಜೊತೆಗೂಡಿ ಸರಕಾರ ರಚನೆಗೆ ಅವಕಾಶ ಕೇಳಬಹುದು ಎಂಬ ಪ್ಲ್ಯಾನ್ ಅನ್ನು ಸೋನಿಯಾ ಗಾಂಧಿ ಮಾಡಿದಂತಿದೆ.