ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡ್ತಿದ್ದಾರೆ ಶ್ರೀಲೀಲಾ! ಕಿಸ್​ ಮೂಲಕ ಡೆಬ್ಯೂ ಮಾಡ್ತಿರೋ ಸುಂದರಿಗೆ ಇನ್ನಿಲ್ಲದ ಬೇಡಿಕೆ!!

ನಟಿಯರಿಗೆ ಗ್ಲ್ಯಾಮರ್​ ಜಗತ್ತಿನಲ್ಲಿ ಲಾಂಗ್​ ಟೈಮ್​ ಲೈಫ್​ ಇರೋದಿಲ್ಲ. ಹೊಸತಾಗಿ ಎಂಟ್ರಿ ಕೊಟ್ಟ ಚೆಲುವೆಯರೆಲ್ಲ ಎರಡ್ಮೂರು ಸಿನಿಮಾಗಳಲ್ಲಿ ಮಿಂಚಿ ಮರೆಯಾಗ್ತಾರೆ. ಬ್ಯೂಟಿ ಪ್ರತಿಭೆ ಇರೋ ಒಬ್ರೋ ಇಬ್ರೋ ಮಾತ್ರ ಉಳ್ಕೊತ್ತಾರೆ. ಹಾಗೆ ಇಂಡಸ್ಟ್ರಿಯಲ್ಲಿ ಲಾಂಗ್​​ ಟೈಮ್​ ಉಳ್ಕೊಲ್ಲೋ ಭರವಸೆ ಹುಟ್ಟಿಸಿರೋ ಹೊಸ ಹುಡ್ಗಿಯೇ ಶ್ರೀಲೀಲಾ.

ad

ಶ್ರೀಲಾಲ ಅನ್ನೋ ಹೆಸ್ರು ಕೇಳೋಕೆ ಹೇಳೋಕೆ ಎಷ್ಟು ಸೊಗಸಾಗಿದೆಯೋ ಹಾಗೆ ಈ ಹೆಸರಿನ ಹುಡುಗಿ ಶ್ರೀಲೀಲಾ ನೋಡೋಕೂ ಅಷ್ಟೋ ಮುದ್ದು​​ ಮುದ್ದಾಗಿದ್ದಾರೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಶ್ರೀಲೀಲಾ ಅಂದ್ರು ತಪ್ಪಾಗಲ್ಲ.


ಶ್ರೀಲೀಲಾ.. ಈಗ ಸ್ಯಾಂಡಲ್​ವುಡ್​​ನಲ್ಲಿ ಸೌಂಡ್​ ಮಾಡ್ತಿರೋ ಹೆಸ್ರು. ಶ್ರೀಲೀಲಾ ಈಗಷ್ಟೆ ಬಣ್ಣದ ಜಗತ್ತಿಗೆ ಎಂಟ್ರಿ ಕೊಡ್ತಿರೋ ಬ್ಯೂಟಿ. ಆಕೆ ಡೆಬ್ಯೂ ಮಾಡ್ತಿರೋ ಕಿಸ್ ಸಿನಿಮಾ ಇನ್ನೂ ರಿಲೀಸ್​ ಆಗಿಲ್ಲ. ಆದ್ರೆ ಈಗ್ಲೇ ಈಕೆಗಿರೋ ವ್ಯಾಲ್ಯೂ ಹತ್ತಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಾಯಕಿಯರಿಗಿರುವಷ್ಟಿದೆ.


ಶ್ರೀಲೀಲಾ ಬ್ಯೂಟಿ ಎಂತಾದ್ದು ಅಂತ ಕಿಸ್ ಸಿನಿಮಾದ ಈ ಹಾಡಿನಲ್ಲೇ ಗೊತ್ತಾಗುತ್ತೆ. ಈಕೆಯ ನಗು, ಕಣ್ಣೋಟಕ್ಕೆ ಅದೆಷ್ಟೋ ಹುಡುಗರ ಹಾರ್ಟ್​ ಬ್ರೇಕ್​ ಆಗಿದೆಯೋ ಗೊತ್ತಿಲ್ಲ. ಈ ಹಾಡಿನಲ್ಲಿ ಶ್ರೀಲೀಲಾರನ್ನ ನೋಡಿದ ಹರೆಯದ ಹುಡುಗರೆಲ್ಲಾ ಆಕೆಯ ಕನವರಿಕೆಯಲ್ಲಿರೋದು ಸುಳ್ಳಲ್ಲಾ. ರೋರಿಂಗ್ ಸ್ಟಾರ್ ಶ್ರೀಮುರಳಿಯ ಭರಾಟೆ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಇದ್ರ ಜೊತೆ ಅಪ್ಪು, ಧ್ರುವ, ಯಶ್ ಸಿನಿಮಾಗಳ ನಾಯಕಿ ಪಾತ್ರವೂ ಈಕೆಯನ್ನ ಹುಡುಕಿಕೊಂಡು ಬಂದಿವೆ.


ಬೆಳ್ಳಿತೆರೆಯ ಮೇಲೆ ಈಗಷ್ಟೇ ನೆಲೆಯೂರುತ್ತಿರುವ ಶ್ರೀಲೀಲಾಗೆ ಕಾಲಿವುಡ್‌, ಟಾಲಿವುಡ್‌ನಿಂದಲೂ ಅವಕಾಶದ ಬಾಗಿಲು ತೆರೆದಿದೆ. ಆದರೆ, ಸಿನಿಮಾಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ಆದ್ರೆ ಶ್ರೀಲೀಲಾ ಇಡೀ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚೋ ಎಲ್ಲಾ ಲಕ್ಷಣ ಕಾಣ್ತಿದೆ.

ಕನ್ನಡದಲ್ಲಿ ಬೆರಳಿಕೆಯ ನಟಿಯರಿದ್ದಾರೆ ಅನ್ನೋ ವಾದ ಇತ್ತು. ಆದ್ರೆ ರಶ್ಮಿಕಾ ಮಂದಣ್ಣ ಬಂದು ಆ ಮಾತನ್ನ ಅಲ್ಲಗಳೆದಿದ್ರು. ಈಗ ಶ್ರೀಲೀಲಾ ಎಂಟ್ರಿ ಆಗಿದ್ದು ಸ್ಯಾಂಡಲ್​ವುಡ್​​ನಲ್ಲೂ ನಾಯಕಿಯರಿಗೇನು ಕೊರತೆ ಇಲ್ಲ ಅಂತ ತೋರಿಸಿದ್ದಾರೆ. ಅದೇನೆ ಇರಲಿ. ಶ್ರೀಲೀಲಾ ಕನ್ನಡ ಸಿನಿ ಪ್ರೇಕ್ಷಕರಿಗೆ ಸಿಕ್ಕ ಹೊಸ ಬ್ಯೂಟಿ ಕ್ವೀನ್​ ಅನ್ನೋದ್ರಲ್ಲಿ ನೋ ಡೌಟ್​..