ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯಸರ್ಕಾರ- ಸಮೀಕ್ಷೆಗೆ ಮುಂದಾದ ಸಿಎಂ ಕುಮಾರಸ್ವಾಮಿ- ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ

 

ಜಲಪ್ರಳಯದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯಾದ್ಯಂತ ಸಿಎಂ ಭೇಟಿ ರದ್ದಾಗಿದೆ. ಸಿಎಂ ಕುಮಾರಸ್ವಾಮಿ ಇಂದು ಮಧ್ಯಾಹ್ನ ಜಲಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೇ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ರದ್ಧಾಗಿದ್ದು, ರಸ್ತೆ ಮೂಲಕ ಸಿಎಂ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ಮಧ್ಯೆ ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸಿಎಂ ಕುಮಾರಸ್ವಾಮಿ ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳ ಮಾಹಿತಿ ನೀಡಿದರು. ಕೊಡಗಿನಲ್ಲಿ ಈಗಾಗಲೇ ಯೋಧರು ರಕ್ಷಣಾ ಕಾರ್ಯ ನಡೆಸಿದ್ದು, ಭೂ ಕುಸಿತದಿಂದ ಯಾರನ್ನು ಸಂಪರ್ಕಿಸುವುದು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊಡಗಿನಲ್ಲಿ 50 ಜೆಸಿಬಿಗಳು ಕಾರ್ಯಾಚರಣೆ ಮಾಡ್ತಿದ್ದು, ಇಂಡಿಯನ್ ಆರ್ಮಿಯಿಂದ 75 ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.ಇನ್ನು ಹಾರಂಗಿಯಲ್ಲಿ ಹೆಲಿಕ್ಯಾಪ್ಟರ್ ಬೀಡುಬಿಟ್ಟಿದ್ದು, ಈಗಾಗಲೇ 900 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದ ಸಿಎಂ, ಮೈಸೂರು, ಮಂಡ್ಯ, ರಾಮನಗರ ಸೇರಿ ಹಲವು ಜಿಲ್ಲೆಯ ಕಂದಾಯ ಅಧಿಕಾರಿಗಳನ್ನ ಕಳುಹಿಸಿಕೊಡಲಾಗಿದೆ. ಜೊತೆಗೆ ವೈದ್ಯರ ತಂಡಗಳನ್ನ ಕಳುಹಿಸಿ ಕೊಡಲಾಗಿದೆ. ಆಹಾರ ಪದಾರ್ಥ, ಹಾಲು ರವಾನೆ ಮಾಡಲಾಗ್ತಿದೆಇಂಧನ ಇಲಾಖೆ ಅಧಿಕಾರಿಗಳನ್ನೂ ಅಲ್ಲಿಗೆ ನಿಯೋಜಿಸಲು ಸೂಚನೆ ನೀಡಿದ್ದೇನೆ. ಪೆಟ್ರೋಲ್, ಡೀಸೆಲ್ ಸರಬರಾಜಿಗೆ ಸೂಚಿಸಲಾಗಿದೆ. ಎಟಿಎಂಗಳಿಗೆ ಹಣ ಕೂಡಿಸಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಂತ್ರಸ್ತರ ನೆರವಿಗೆ ಮಡಿಕೇರಿಯಲ್ಲಿ 31 ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ಇನ್ನು ಕೊಡಗಿನಲ್ಲಿ ರಸ್ತೆಗಳಿಗೆ ದೊಡ್ಡ ಮಟ್ಟದ ಡ್ಯಾಮೇಜ್ ಆಗಿದೆ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಮೆಡಿಸಿನ್, ವೈದ್ಯರ ಕೊರತೆ ಇರಬಾರದು ಅಂತ ಸೂಚನೆ ನೀಡಿದ್ದೇನೆ. ಕ್ಯಾಬಿನೆಟ್ ಸಬ್ ಕಮಿಟಿ ಜತೆಗೆ ದ ಮುಖ್ಯ ಕಾರ್ಯದರ್ಶಿ ನೇತೃತ್ವದ ಕಮಿಟಿ ರಚನೆ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಗಳ ಸಮಿತಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೊಡಗಿಗೆ ಏನೇನು ಬೇಕೋ ಎಲ್ಲವೂ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತೆ. ಪ್ರತೀ ನಿಮಿಷದ ಮಾಹಿತಿಯನ್ನ ಸಮಿತಿ ತೆಗೆದುಕೊಳ್ಳುತ್ತಿದೆ ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ ಗೆ ಧನ ಸಹಾಯ ಮಾಡಿ ಎಂದು ಸಿಎಂ ಮನವಿ ಮಾಡಿದರು. ಅಲ್ಲದೇ ಜಲಪ್ರಳಯದಿಂದ ನೊಂದಿರುವ ಕೊಡಗಿಗೆ ಈ ಹಿಂದೆ 31 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು, ಈಗ 100 ಕೋಟಿ ಅನುದಾನ ಬಿಡುಗಡೆ ಮಾಡುತ್ತೇವೆ. ಕೊಡಗು ಭಾಗದಲ್ಲಿ 800 ಕ್ಕೂ ಹೆಚ್ಚಿನ ಮನೆಗಳು ಹಾನಿಯಾಗಿವೆ. ವಿಶೇಷ ಪ್ರಕರಣ ಎಂದು ಭಾವಿಸಿ ಮನೆ ಕಳೆದುಕೊಂಡವರಿಗೆ ತಲಾ 2 ಲಕ್ಷ ಮತ್ತು ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.