ಲೋಕಸಭೆ ಚುನಾವಣೆಗೆ ರಾಜ್ಯ ಟಾರ್ಗೆಟ್​​- ಮೋಹನಭಾಗವತ್​ ನೇತೃತ್ವದಲ್ಲಿ ರಾಯಚೂರಿನಲ್ಲಿ ಬಿಜೆಪಿ-ಆರ್​ಎಸ್​ಎಸ್​ ಬೈಠಕ್​!

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 25 ಲೋಕಸಭೆ ಕ್ಷೇತ್ರಗಳ ಮೇಲೆ ಆರ್ ಎಸ್ ಎಸ್ ಕಣ್ಣಿಟ್ಟಿದ್ದು, ಇದರ ಪೂರ್ವಭಾವಿಯಾಗಿ     ಹೊರವಲಯದಲ್ಲಿ ಆರ್​ಎಸ್​ಎಸ್​ನ ಬೈಠಕ್​ ನಡೆಯಿತು. ಬೈಠಕ್​ನಲ್ಲಿ ಪಾಲ್ಗೊಂಡ ಹಿರಿಯ ಆರ್​ಎಸ್ಎಸ್​ ಮುಖಂಡ ಮೋಹನ್ ಭಾಗವತ್​ ಸ್ಥಳೀಯ ಬಿಜೆಪಿ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದರು.

 

 

ಗಣೇಶ್​ ಚತುರ್ಥಿಯ ಎರಡನೇ ವಾರದಿಂದಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಸೂಚಿಸಿದ ಮೋಹನ್ ಭಾಗವತ್​, ದೇಶದ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾದ್ರೆ ಕರ್ನಾಟಕದಲ್ಲಿ ಫುಲ್ ಫಿಲ್​ ಮಾಡಲು ಬಿಜೆಪಿ ನಾಯಕರಿಗೆ ಭಾಗವತ್​​ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

 

 

ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ನಾಯಕರು ಹಾಗೂ ಆರ್​ಎಸ್​ಎಸ್​ ನಾಯಕರ ನಡುವಿನ ಸಮನ್ವಯ ಕೊರತೆ ಬಗ್ಗೆ ಮೋಹನ್ ಭಾಗವತ್​ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿರಿಯ ಬಿಜೆಪಿ ನಾಯಕರು ಆಯ್ದ ಮುಖಂಡರ ಜೊತೆ 25 ಕ್ಷೇತ್ರಗಳಲ್ಲಿ ಸಂಚಾರ ಮಾಡೋದಿಕ್ಕೆ ಕೂಡ ಮೋಹನ ಭಾಗವತ್​ ಸೂಚನೆ ನೀಡಿದ್ದಾರೆ . ಒಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಹಾಗೂ ಆರ್​ಎಸ್​ಎಸ್​ ಗಂಭೀರವಾಗಿ ಪರಿಗಣಿಸಿರೋದಂತು ಸತ್ಯ.