ರಾಜ್ಯ ರಾಜಕೀಯಲ್ಲಿ ಮತ್ತೆ ಹೈಡ್ರಾಮಾ ಆರಂಭ! ಲೋಕಸಭಾ ಫಲಿತಾಂಶದ ಬಳಿಕ ಬಂಡಾಯ ಶಾಸಕರ ರಾಜೀನಾಮೆ?!

ರಾಜ್ಯ ರಾಜಕೀಯದಲ್ಲಿ ಮತ್ತೆ ರೋಚಕ ಬೆಳವಣಿಗೆಗಳು ನಡೆಯುತ್ತಿದೆ. ಮೊನ್ನೆಯಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ಖಚಿತಪಡಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ರಾಜಕೀಯ ಹೈಡ್ರಾಮಗಳು ಆರಂಭಗೊಂಡಿದ್ದು, ರಮೇಶ್ ಜಾರಕಿಹೊಳಿ ನಿವಾಸ ಚಟುವಟಿಕೆಗಳ ಕೇಂದ್ರಬಿಂದುವಾಗುತ್ತಿದೆ.

ad

ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ಅತ್ಯಂತ ತುರ್ತಾಗಿ ಬೆಂಗಳೂರು ಸರ್ಕಾರಿ ನಿವಾಸಕ್ಕೆ ಆಗಮಿಸಿದ ಬೆನ್ನಲ್ಲೇ ಹಲವು ಅತೃಪ್ತ ಶಾಸಕರು ರಮೇಶ್ ಜಾರಕಿಹೊಳಿಯವರೊಂದಿಗೆ ಕೈಜೋಡಿಸಲು ಅವರ ನಿವಾಸದತ್ತ ಮುಖಮಾಡುತ್ತಿದ್ದಾರೆ.

ಇಂದೂ ಕೂಡ ಕಾಗವಾಡ ಶಾಸಕ ಶ್ರೀಮಂತಪಾಟೀಲ್, ಮಾಧ್ಯಮಗಳ ಕಣ್ಣುತಪ್ಪಿಸಿ ಬೆಂಗಳೂರಿನತ್ತ ಮುಖ ಮಾಡಿದ್ದು, ರಮೇಶ್​ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ಅಥಣಿ ಎಮ್​ಎಲ್​ಎ ಮಹೇಶ್ ಕುಮಟಳ್ಳಿ ಕೂಡ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಇಬ್ಬರ ಪೋನ್ ಕೂಡ ಸ್ವಿಚ್​ ಆಪ್​ ಆಗಿದೆ.

 


ಇನ್ನು ಬೆಂಗಳೂರಿನಲ್ಲಿ ಕುಳಿತ ರಮೇಶ್ ಜಾರಕಿಹೊಳಿ ಕೂಡ ಸಖತ್ ಪ್ಲ್ಯಾನ್ ರೂಪಿಸುತ್ತಿದ್ದು, ಬಂಡಾಯ ಶಾಸಕರ ಸಂಖ್ಯೆ ಹೆಚ್ಚಿಸಲು ರಮೇಶ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗ್ಲೇ ಶಾಸಕರಾದ ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ ಸೇರಿದಂತೆ ಹಲವರನ್ನು ರಮೇಶ್ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ, ಎಲ್ಲ ಬಂಡಾಯ ಶಾಸಕರನ್ನು ಒಟ್ಟುಗೂಡಿಸಿಕೊಂಡು ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.