ಕೊನೆಗೂ ರೀವಿಲಾಯ್ತು ದಬಾಂಗ್​​​-3 ನಲ್ಲಿ ಸುದೀಪ್​ ರೋಲ್​​​! ಬಾಲಿವುಡ್​ಗೆ ಖಳನಾಯಕನಾಗ್ತಿದ್ದಾನೆ ಸ್ಯಾಂಡಲವುಡ್​ ಕಿಚ್ಚ!!

ಸಧ್ಯದಲ್ಲೇ ಸಿನಿರಸಿಕರಿಗೆ ಸ್ಯಾಂಡಲವುಡ್​ ಮತ್ತು ಬಾಲಿವುಡ್​​ ಸ್ಟಾರ್​ ನಟರಿಬ್ಬರನ್ನು ಒಟ್ಟಿಗೆ ಒಂದೇ ತೆರೆಯ ಮೇಲೆ ನೋಡುವ ಅವಕಾಶ ಸಿಗಲಿದೆ. ಹೌದು ದಬಾಂಗ್-3 ಚಿತ್ರದ ಮೂಲಕ ಸಲ್ಮಾನ್ ಖಾನ್​ ಹಾಗೂ ಕನ್ನಡದ ಕಿಚ್ಚ ಸುದೀಪ್​ ಒಟ್ಟಿಗೆ ತೆರೆ ಬರಲಿದ್ದಾರೆ. ಆದರೆ ಕಿಚ್ಚ ಸುದೀಪ್ ದಬಾಂಗ್​-3 ನಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಇದುವರೆಗೂ ಕುತೂಹಲಕ್ಕೆ ಕಾರಣವಾಗಿದ್ದು, ಈಗ ರಿವೀಲ್​ ಆಗಿದೆ.

ad

ಬಾಲಿವುಡ್​​ನ ಬಹುನೀರಿಕ್ಷಿತ ಚಿತ್ರ ದಬಾಂಗ್​-3 ನಲ್ಲಿ ಕಿಚ್ಚ ಸುದೀಪ್​, ಸಿಖಂದರ್ ಭಾರದ್ವಾಜ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ನಟ ಸಲ್ಮಾನ್ ಖಾನ್ ಮಿಂಚಿದ್ರೆ, ಸಿಖಂದರ್ ಭಾರದ್ವಾಜ್ ಪಾತ್ರದ ಮೂಲಕ ಕಿಚ್ಚ ಸುದೀಪ್ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಧ್ಯ ನಟ ಸುದೀಪ್ ಕೋಟಿಗೊಬ್ಬ-3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದರ ಬಳಿಕ ಸುದೀಪ್ ದಬಾಂಗ್​-3 ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಪೆಲ್ವಾನ್ ಚಿತ್ರದ ಶೂಟಿಂಗ್​ ಮುಗಿದಿದ್ದು, ಚಿತ್ರ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

ಇನ್ನು ಸುದೀಪ್ ರ ಪೈಲ್ವಾನ್ ಚಿತ್ರಕ್ಕೆ ಸಲ್ಮಾನ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ದಬಾಂಗ್​ನಲ್ಲಿ ನಟಿಸಲು ಕಿಚ್ಚಸುದೀಪ್ ಆಯ್ಕೆಯಾಗಿದ್ದರು. ಪ್ರಭುದೇವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದಬಾಂಗ್-3 ರಲ್ಲೂ ಸೋನಾಕ್ಷಿ ನಾಯಕಿಯಾಗಿದ್ದು, ಈ ಚಿತ್ರ ಸಾಕಷ್ಟು ವಿಶೇಷತೆಗಳೊಂದಿಗೆ ಮನಸೆಳೆಯುತ್ತಿದೆ. ಇನ್ನು ಕಿಚ್ಚ ಸುದೀಪರನ್ನು ವಿಲನ್​ ಆಗಿ