ರಂಭಾಪುರಿ ಸ್ವಾಮೀಜಿಗೆ ಸುಡುಗಾಡು ಸಿದ್ದರ ಸವಾಲು !! ಇದು ಎಚ್ ಡಿಕೆ, ಯಡಿಯೂರಪ್ಪ ಕುರ್ಚಿ ಭವಿಷ್ಯ !!

ಜನಪದೀಯವಾಗಿ ಭವಿಷ್ಯ ನುಡಿಯುವ ಕಾಯಕವನ್ನು ಶತಶತಮಾನಗಳಿಂದ ಮಾಡಿಕೊಂಡು ಬಂದಿರುವ ಸುಡುಗಾಡು ಸಿದ್ದರು ಮತ್ತು ಕಾವಿಧಾರಿ ಸ್ವಾಮಿಗಳ ಮಧ್ಯೆ ಭವಿಷ್ಯದ ಸವಾಲು ನಡೆಯುತ್ತಿದೆ. ಈ ಸವಾಲು ನಡೆಯುತ್ತಿರುವುದು ಮುಖ್ಯಮಂತ್ರಿ ಕುರ್ಚಿಯ ಬಗ್ಗೆ.ಅಕ್ಟೋಬರ್ ಎರಡನೇ ವಾರ ಯಡಿಯೂರಪ್ಪ ಮತ್ತೆ ಸಿಎಂ ಆಗ್ತಾರೆ ಎಂದು ಇತ್ತಿಚೆಗೆ ರಂಭಾಪುರಿ ಶ್ರೀಗಳು ಹೇಳಿಕೆ ನೀಡಿದ್ದರು. ಈಗ ರಂಬಾಪುರಿ ಶ್ರೀಗಳಿಗೆ ಸುಡುಗಾಡು ಸಿದ್ದರು ಸವಾಲ್ ಹಾಕಿದ್ದಾರೆ.

ad

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸಿದ್ದರಹಟ್ಟಿ ಗ್ರಾಮದಲ್ಲಿ ವಾಸವಿರುವ ಸಿದ್ದರು, ಸಿಎಂ ಕುಮಾರಸ್ವಾಮಿ ಕೋಟಿಗೊಬ್ಬ ಭಕ್ತರು, ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ಕುಮಾರಸ್ವಾಮಿ 5 ವರ್ಷ ಸಿಎಂ ಆಗಿ ಪೂರೈಸುತ್ತಾರೆ. ನಾವು ಹೇಳಿದ್ದು ಸುಳ್ಳಾಗಿ ಅಕ್ಟೋಬರ್ ನಲ್ಲಿ ಹೆಚ್ಡಿಕೆ ಅಧಿಕಾರ ಕಳೆದುಕೊಂಡರೆ ನಾವು ನಮ್ಮ ಸಮುದಾಯದ ಕುಲಕಾಯಕ ಬಿಡುತ್ತೇವೆ. ಈ ವಿಷಯದಲ್ಲಿ ರಂಭಾಪುರಿ ಶ್ರೀಗಳು ಸವಾಲು ಹಾಕಿದ್ರೆ ನಾವು ಸ್ವೀಕರಿಸಲು ಸಿದ್ದ ಎಂದು ಸುಡುಗಾಡು ಸಿದ್ದರಾಗಿರುವ ಮಂಜಣ್ಣ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಚುನಾವಣೆಗೂ ಮೊದಲು ಸುಡುಗಾಡು ಸಿದ್ದರು ಭವಿಷ್ಯ ನುಡಿದಿದ್ದರು. ಚುನಾವಣೆ ಬಳಿಕ ಫಲಿತಾಂಶದಲ್ಲಿ ಜೆಡಿಎಸ್ ಅತ್ಯಂತ ಕಡಿಮೆ ಸ್ಥಾನ ಗಳಿಸಿದ್ದರೂ ಕುಮಾರಸ್ವಾಮಿಯೇ ಸಿಎಂ ಆಗ್ತಾರೆ ಎಂಬ ತಮ್ಮ ಭವಿಷ್ಯದ ನಿಲುವಿಗೆ ಸಿಡುಗಾಡು ಸಿದ್ದರು ಬದ್ಧರಾಗಿದ್ದರು. ಸುಡುಗಾಡು ಸಿದ್ದರ ಭವಿಷ್ಯದಂತೆಯೇ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.

ಸಧ್ಯ ಎಚ್ ಡಿ ಕುಮಾರಸ್ವಾಮಿ ಅಕ್ಟೋಬರ್ ನಲ್ಲಿ ರಾಜೀನಾಮೆ ನೀಡಿ, ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದು ರಂಭಾಪುರಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರಿಂದ ಸುಡುಗಾಡು ಸಿದ್ದರ ಭವಿಷ್ಯ ಚರ್ಚೆಗೆ ಬಂದಿದೆ. ಶತಶತಮಾನಗಳಿಂದ ಭವಿಷ್ಯ ನುಡಿಯೋ ಕಾಯಕ ಮಾಡುತ್ತಿರುವ ಸುಡುಗಾಡು ಸಿದ್ದರ ಭವಿಷ್ಯ ನಿಜವಾಗುತ್ತೋ, ಕಾವಿಧಾರಿ ಸ್ವಾಮೀಜಿಗಳ ಭವಿಷ್ಯ ನಿಜವಾಗುತ್ತೋ ಭವಿಷ್ಯ ನಿರ್ಧರಿಸುತ್ತೆ.