ಮೋಕ್ಷಕ್ಕಾಗಿ ಕುಟುಂಬಕ್ಕೆ ಆತ್ಮಹತ್ಯೆಗೆ ಪ್ರಚೋದನೆ… ರಾಜ್ಯದಲ್ಲೂ ಪತ್ತೆಯಾಯ್ತು ಬೆಚ್ಚಿ ಬೀಳಿಸುವ ಪ್ರಕರಣ… ಮಂಗಳಮುಖಿ ಮಾಂತ್ರಿಕನ ವಿರುದ್ಧ ಮಹಿಳೆ ಆರೋಪ…

ಮೋಕ್ಷಕ್ಕಾಗಿ ದೆಹಲಿಯಲ್ಲಿ ಕುಟುಂಬವೊಂದರ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಮಾಂತ್ರಿಕನೋರ್ವ ಕುಟುಂಬವೊಂದಕ್ಕೆ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ad

ಮಂಡ್ಯ ತಾಲೂಕಿನ ಮಾರಗೌಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎನ್ನಲಾಗಿದೆ. ಸಾಮೂಹಿಕ ಆತ್ಮಹತ್ಯೆಗೆ ಮಂಗಳಮುಖಿ ಮಾಂತ್ರಿಕ ಪ್ರಚೋದಿಸಿದ್ದಾನೆ ಎಂದು ನೊಂದ ಮಹಿಳೆ ದೂರಿದ್ದಾರೆ.

ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ ಸಿಗುತ್ತದೆ ಎಂದು ಮಾಂತ್ರಿಕ ಪುಸಲಾಯಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ನೊಂದ ಮಹಿಳೆ ಮನವಿ ಮಾಡಿದ್ದಾರೆ. ವೃತ್ತಿಯಲ್ಲಿ ಟೈಲರ್ ಆಗಿರುವ ಅನಿತಾ ದಂಪತಿ ಮೈಸೂರು ತಾಲೂಕಿನ ಹುಣಸೂರಿನಲ್ಲಿ ವಾಸವಾಗಿದ್ದಾರೆ. ಇವರನ್ನು ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದಿಸಿರುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.