ಪೈಲ್ವಾನ್​ ಚಿತ್ರದಲ್ಲಿ ಬಾಲಿವುಡ್​ ಹೀರೋ ಸುನಿಲ್​ ಶೆಟ್ಟಿ ರೋಲ್​ ರಿವೀಲ್​! ಮೋಡಿ ಮಾಡ್ತಿದೆ ಫರ್ಸ್ಟ್​ ಲುಕ್​​!!​

ಸ್ಯಾಂಡಲ್​​​ವುಡ್​​​ನ ಬಹುನೀರಿಕ್ಷಿತ ಚಿತ್ರ ಪೈಲ್ವಾನ್​. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ಬಾರಿಗೆ ಕುಸ್ತಿಪಟುವಾಗಿ ಅಭಿನಯಿಸುತ್ತಿರುವ ಪೈಲ್ವಾನ್ ಫರ್ಸ್ಟ್​ ಹಾಗೂ ಟೀಸರ್​​ ಸಾಕಷ್ಟು ಸುದ್ದಿಮಾಡಿತ್ತು. ಈ ಚಿತ್ರ ಹಲವು ವಿಶೇಷತೆಗಳಿಂದ ಸುದ್ದಿ ಮಾಡಿದ್ದು, ಅದರಲ್ಲಿ ಬಾಲಿವುಡ್​ ಬಿಗ್​ ನೇಮ್​ ಸುನೀಲ್ ಶೆಟ್ಟಿ ಈ ಚಿತ್ರದ ಮೂಲಕ ಕನ್ನಡಕ್ಕೆ ಬರ್ತಿರೋದು ಕೂಡ ಒಂದು.


ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ತೆರೆಗೆ ಬರಲಿರುವ ಈ ಚಿತ್ರ ನೋಡೋಕೆ ಸ್ಯಾಂಡಲವುಡ್​ ಜೊತೆ 8 ಭಾಷೆಯ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಈ ಚಿತ್ರದಲ್ಲಿ ಸುನೀಲ್​ ಶೆಟ್ಟಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಸುನೀಲ್ ಶೆಟ್ಟಿಯ ಫರ್ಸ್ಟ್​ ಲುಕ್​ ಮೋಡಿ ಮಾಡಿದೆ.


ಪೈಲ್ವಾನ್​ ಚಿತ್ರತಂಡ ಬಿಡುಗಡೆಮಾಡಿರುವ ಸುನೀಲ್ ಶೆಟ್ಟಿ ಫರ್ಸ್ಟ್​ ಲುಕ್​ ಇದೀಗ ಸಖತ್ ವೈರಲ್​ ಆಗಿದ್ದು, ಚಿತ್ರಪ್ರಿಯರು ಎಂಜಾಯ್ ಮಾಡ್ತಿದ್ದಾರೆ. ಪೈಲ್ವಾನ್​ ಚಿತ್ರ ಏಕಕಾಲದಲ್ಲಿ 8 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸುದೀಪ್​ ಫ್ಯಾನ್ಸ್​ಗಳ ನೀರಿಕ್ಷೆ ಹೆಚ್ಚಿಸಿದೆ.