ಫಲಿತಾಂಶ ಪ್ರಕಟವಾದ ಮೂರೇ ದಿನದಲ್ಲಿ ಅಮೇಥಿಯಲ್ಲಿ ರಕ್ತದೋಕುಳಿ! ಗುಂಡೇಟಿಗೆ ಸ್ಮೃತಿ ಇರಾನಿ ಆಪ್ತ ಬಲಿ!!

ದೇಶದ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶದ ಅಮೇಥಿಯಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್​ ಯುವರಾಜ ರಾಹುಲ್ ಗಾಂಧಿಯವರನ್ನು ಸೋಲಿಸಿದ ಖುಷಿಯಲ್ಲಿದ್ದ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಖತ್ ಶಾಕ್ ಎದುರಾಗಿದೆ. ಫಲಿತಾಂಶ ಪ್ರಕಟವಾದ ಮೂರು ದಿನದಲ್ಲೇ ಅವರ ಆತ್ಮೀಯ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತ ಸುರೇಂದ್ರ ಸಿಂಗ್​ ಬರ್ಬರವಾಗಿ ಹತ್ಯೆಯಾಗಿದ್ದಾರೆ.


ನಿನ್ನೆ ರಾತ್ರಿ ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್​ ಮೇಲೆ ಅಪರಿಚಿತರು ಗುಂಡು ಹಾರಿಸಿ ಕಗ್ಗೂಲೆ ಮಾಡಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಸ್ಮೃತಿ ಇರಾನಿ ಬರೌಲಿಗೆ ಆಗಮಿಸಿದ್ದು, ಸುರೇಂದ್ರ ಸಿಂಗ್ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಸುರೇಂದ್ರ ಅವರ ಮೆರವಣಿಗೆಯ ಚಟ್ಟಕ್ಕೆ ಹೆಗಲು ಕೊಟ್ಟು ತಮ್ಮ ಗೌರವ ಸಲ್ಲಿಸಿದ್ದಾರೆ.


ಇನ್ನು ಸುರೇಂದ್ರ ಹತ್ಯೆಗೆ ಉತ್ತರ ಪ್ರದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಮೃತ ಸುರೇಂದ್ರ ಅವರ ಪಾರ್ಥೀವಶರೀರಕ್ಕೆ ಹೆಗಲು ಕೊಟ್ಟು ಹೊತ್ತು ನಡೆದ ಸ್ಮೃತಿ ಇರಾನಿ.

ಅಮೇಥಿಯಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಸಂಸದೆ ಸ್ಮೃತಿ ಇರಾನಿ ಆಪ್ತ ಸುರೇಂದ್ರ ಅವರ ಹತ್ಯೆಯಾಗಿದ್ದು, ಮೃತ ಸುರೇಂದ್ರ ಅವರ ಪಾರ್ಥೀವಶರೀರಕ್ಕೆ ಹೆಗಲು ಕೊಟ್ಟು ಹೊತ್ತು ನಡೆದ ಸ್ಮೃತಿ ಇರಾನಿ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 26, 2019