ಲಂಡನ್​ನಲ್ಲಿ ಹುಟ್ಟುಹಬ್ಬ ಆಚರಿಸಿದ ಶಿವಣ್ಣಗೆ ಸಿಕ್ತು ಸಪ್ರೈಸ್​ ಗಿಫ್ಟ್​! ಏನದು ಸ್ಪೆಶಲ್​ ಗಿಫ್ಟ್​ ಇಲ್ಲಿದೆ ಡಿಟೇಲ್ಸ್​​!!

ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್​ನಲ್ಲಿರೋ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಆದರೇ ಅಭಿಮಾನಿಗಳ ಬೇಸರ ಹೋಗಲಾಡಿಸೋದಿಕ್ಕೆ ಶಿವಣ್ಣ ಅಭಿಮಾನಿಗಳ ಜೊತೆ ವಿಡಿಯೋ ಚಾಟ್​ ನಡೆಸಿದ್ದರು.

ad


ಆದರೆ ಅಭಿಮಾನಿಗಳಿಗೆ ಸಪ್ರೈಸ್​ ನೀಡಿದ ಶಿವರಾಜ್​ಕುಮಾರ್​ಗೂ ಅವರ ಸ್ನೇಹಿತರೊಬ್ಬರು ಸಪ್ರೈಸ್​ ನೀಡಿದ್ದಾರೆ. ಹೌದು ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡು ವಿಶ್ರಾಂತಿಯಲ್ಲಿರುವ ಶಿವಣ್ಣ ಅವರನ್ನು ಕನ್ನಡಿಗ ಹಾಗೂ ಕ್ರಿಕೆಟಿಗ್ ಅನಿಲ್ ಕುಂಬ್ಳೆ ಭೇಟಿ ಮಾಡಿದ್ದಾರೆ.
ಅನಿಲ್ ಕುಂಬ್ಳೆ ಶಿವಣ್ಣರನ್ನು ಭೇಟಿ ಮಾಡಿದ್ದು, ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂದು ಶುಭಹಾರೈಸಿದ್ದಾರೆ. ಇತ್ತೀಚಿಗೆ ಸೋಷಿಯಲ್​ ಮೀಡಿಯಾಗೆ ಸಕ್ರಿಯವಾಗಿ ಎಂಟ್ರಿ ಕೊಟ್ಟಿರುವ ಶಿವರಾಜ್​ಕುಮಾರ್ ಈ ಪೋಟೋವನ್ನು ತಮ್ಮ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ.


ಶಿವಣ್ಣ ಆಫರೇಶನ್​ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಅವರೊಂದಿಗೆ ಇದ್ದು, ಹುಟ್ಟುಹಬ್ಬ ಆಚರಿಸಿದ್ದರು. ಈ ಪೋಟೋಗಳನ್ನು ನೋಡಿದ ಕ್ರಿಕೆಟಿಗ ಅನಿಲ್ ಕುಂಬ್ಳೆ ಶಿವಣ್ಣರನ್ನು ಮೀಟ್ ಮಾಡಿ ಅವರಿಗೆ ಸಪ್ರೈಸ್ ನೀಡಿದ್ದಾರೆ. ವಿಶ್ವಕಪ್​ ಸೀರಿಸ್​ಗಳಿಗಾಗಿ ಅನಿಲ್ ಕುಂಬ್ಳೆ ಕೂಡ ಪ್ರವಾಸದಲ್ಲಿದ್ದಾರೆ.


ಇನ್ನು ಕನ್ನಡದ ಚಿತ್ರರಂಗ ಹಾಗೂ ಕ್ರಿಕೆಟ್​ನ ಸ್ಟಾರ್​ಗಳನ್ನು ಒಟ್ಟಾಗಿ ಒಂದೇ ಕಡೆ ನೋಡಿರುವ ಅಭಿಮಾನಿಗಳು ಫುಲ್​ ಖುಷಿಯಾಗಿದ್ದು, ಪೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.