ಸಚಿವ ಆರ್ ವಿ ದೇಶಪಾಂಡೆ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡುವೆ ವಾಕ್ ಸಮರ..

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕ್ಷೇತ್ರದ ನಾಲ್ಕು ಇಂದಿರಾ ಕ್ಯಾಂಟೀನ್ ಕೊನೆಗೂ ಉದ್ಘಾಟನೆ ಭಾಗ್ಯವನ್ನು ಕಂಡವು. ಆದ್ರೆ ಉದ್ಘಾಟನೆ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನಡುವೆ ವಾಕ್ ಸಮರ ನಡೆಯಿತು. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಒಟ್ಟು 12 ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು, ಅವುಗಳನ್ನು ನಿರ್ವಹಣೆ ಮಾಡಲು ಪಾಲಿಕೆಯಲ್ಲಿ‌ ಹಣ ಕೊರತೆ ಉಂಟಾಗುತ್ತೇ ಅಂತಾ ಶೆಟ್ಟರ್ ಸಚಿವರ ಗಮನಕ್ಕೆ ತಂದ್ರು.

ad

ಈ ವೇಳೆ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನೂ ಇಂದಿರಾ ಕ್ಯಾಂಟೀನಗಳಿಗೆ ರಾಜ್ಯ ಸರ್ಕಾರ ಶೇಕಡಾ 30 ಅನುಧಾನ ನೀಡಿದ್ರೆ, ಮಹಾನಗರ ಪಾಲಿಕೆ ಶೇಕಡಾ 70 ಅನುಧಾನ ನೀಡುತ್ತದೆ. ಆದ್ರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೇವೆ ಹಾಗಾಗಿ ನಮಗೆ ಶೇಕಡಾ 70 ಅನುಧಾನ ನೀಡಲು ಆಗುವದಿಲ್ಲ ಅಂತಾ ಶೆಟ್ಟರ್ ಸ್ಪಷ್ಟ ಪಡೆಸಿದಾಗ ಸಚಿವ ಆರ್ ವಿ ದೇಶಪಾಂಡೆ ಇಡೀ ರಾಜ್ಯಾದ್ಯಂತ ಇದೆ ವ್ಯವಸ್ಥೆ ಜಾರಿಯಲ್ಲಿದೆ ಎಂದು ಟಾಂಗ್ ನೀಡಿದ್ರು. ಕೊನೆಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಶೆಟ್ಟರ್ ಅವರಿಗೆ ಸಮ್ಮನಾಗುವಂತೆ ಹೇಳದ್ರು ಸಚಿವ ಆರ್ ವಿ ದೇಶಪಾಂಡೆ ಅವರು…