ಎಲೆಕ್ಷನ್​ ಗೆದ್ದ ನಟಿಮಣಿ ನಾಪತ್ತೆ! ಸಮಸ್ಯೆ ಕೇಳೋರಿಲ್ಲದೇ ಕ್ಷೇತ್ರದ ಜನ ಕಂಗಾಲು!!

ಚುನಾವಣೆ ವೇಳೆ ಭಾಷಣ ಹಾಗೂ ಭರವಸೆಗಳ ಮೂಲಕ ಜನರ ಗಮನ ಸೆಳೆದಿದ್ದ ನಟಿಮಣಿ ವಿಧಾನಸಭೆ ಚುನಾವಣೆ ಗೆದ್ದು ಶಾಸಕಿಯಾದ ಬಳಿಕ ಪೋನ್ ಸ್ವಿಚ್​​ ಆಪ್​ ಮಾಡಿ ನಾಪತ್ತೆಯಾಗಿದ್ದು, ನಟಿಮಣಿ ವರ್ತನೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೌದು ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಫೈರ್​ ಬ್ರ್ಯಾಂಡ್​ ಎಂದೇ ಖ್ಯಾತಿ ಗಳಿಸಿದ್ದ ಸಿನಿಮಾ ನಟಿ ರೋಜಾ, ವೈಎಸ್​ಆರ್​ ಪಕ್ಷದಿಂದ ಗೆಲುವು ಸಾಧಿಸಿದ್ದರು. ಚುನಾವಣೆ ವೇಳೆ ಭರ್ಜರಿ ಅಭಿವೃದ್ಧಿಯ ಭರವಸೆಯನ್ನು ರೋಜಾ ನೀಡಿದ್ದರು. ಆದರೆ ಇದೀಗ ರೋಜಾ ಪೋನ್ ಸ್ವಿಚ್​ ಆಪ್​ ಮಾಡಿಕೊಂಡು ನಾಪತ್ತೆಯಾಗಿದ್ದು, ಕ್ಷೇತ್ರದ ಜನರು ಕಂಗಾಲಾಗಿದ್ದಾರೆ.


ಮೂಲಗಳ ಮಾಹಿತಿ ಪ್ರಕಾರ ರೋಜಾ, ಜಗನ್ ಮೋಹನ್ ರೆಡ್ಡಿ ಸಚಿವಸಂಪುಟದಲ್ಲಿ ಮಹತ್ವದ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಆದರೆ ಜಗನ್ ಮೋಹನ್ ರೆಡ್ಡಿ ರೋಜಾಗೆ ಸ್ಥಾನ ನೀಡಿಲ್ಲ. ಇದರಿಂದ ಮುನಿಸಿಕೊಂಡಿರುವ ರೋಜಾ, ಅಸಮಧಾನಗೊಂಡಿದ್ದು, ಇದೇ ಕಾರಣಕ್ಕೆ ಪೋನ್ ಸ್ವಿಚ್​ ಆಪ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.


ವೈಎಸ್​ಆರ್ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ರೋಜಾ ಉತ್ತಮ ಕೆಲಸಗಳ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಸಹಜವಾಗಿಯೇ ಜಗನ್ ಸಚಿವ ಸಂಪುಟದಲ್ಲಿ ರೋಜಾ ಸ್ಥಾನದ ನೀರಿಕ್ಷೆಯಲ್ಲಿದ್ದರು. ಇದೀಗ ಅವರ ಅಸಮಧಾನಕ್ಕೆ ಬಡಪಾಯಿ ಜನರು ಬಲಿಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ಸಿಗದ ಶಾಸಕಿ ವಿರುದ್ಧ ಆಕ್ರೋಶಗೊಂಡಿದ್ದಾರೆ.