ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್​​! ಪ್ರಯಾಣಿಕರ ಜೀವ ಉಳಿಸಿದ ಚಾಲಕ!!

ರಸ್ತೆಯಲ್ಲಿ ಸಾಗುತ್ತಿದ್ದ ಖಾಸಗಿ ಬಸ್​ವೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 20 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ಮಂಡ್ಯ ಶ್ರೀರಂಗಪಟ್ಟಣದ ಗಣಂಗೂರು ಬಳಿ ಈ ಘಟನೆ ನಡೆದಿದ್ದು, ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್​ ಹೊತ್ತಿ ಉರಿದಿದೆ. ಇನ್ನು ಎಂಜಿನ್​ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಎಚ್ಚೆತ್ತ ಡ್ರೈವರ್​ ತಕ್ಷಣ ಎಲ್ಲ ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ್ದಾನೆ. ತಕ್ಷಣ ಬಸ್​ ಹೊತ್ತಿ ಉರಿದಿದೆ.


ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರೂ ಬೆಲೆಬಾಳುವ ವಸ್ತುಗಳು, ಪ್ರಯಾಣಿಕರ ಲಗೇಜ್​ಗಳು ಪೂರ್ತಿ ಸುಟ್ಟು ಕರಕಲಾಗಿವೆ. ಕಳೆದ ಬೇಸಿಗೆಯಲ್ಲೂ ಹಲವೆಡೆ ಇದೆ ರೀತಿ ಬಸ್​ಗಳು ಬೆಂಕಿಗಾಹುತಿಯಾಗಿದ್ದು ಹಲವರ ಸಾವಿಗೆ ಕಾರಣವಾಗಿತ್ತು.