ರಾಹುಲ್​​ಗಾಂಧಿ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ! MLA ಹ್ಯಾರೀಸ್ ಗಂಭೀರ ಆರೋಪ!

ಉತ್ತರ ಪ್ರದೇಶದ ಅಮೇಥಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಣೆಗೆ ಗನ್​ ಪಾಯಿಂಟ್​ ಇಡಲಾಗಿತ್ತು ಎಂಬ ವಿಚಾರ ಇದೀಗ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್​ ನಾಯಕರು ಈ ಅವಕಾಶವನ್ನು ಕೇಂದ್ರ ಸರ್ಕಾರವನ್ನು ಟೀಕಿಸಲು ಬಳಸಿಕೊಳ್ಳುತ್ತಿದೆ.


ಕರ್ನಾಟಕದಲ್ಲೂ ಈ ವಿಚಾರ ಸಾಕಷ್ಟು ಚರ್ಚೆಗೀಡಾಗಿದ್ದು, ಶಾಂತಿನಗರ ಎಮ್​ಎಲ್​ಎ ಎನ್​.ಎ.ಹ್ಯಾರೀಸ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದಿರೋದಕ್ಕೆ ಎಸ್​ಪಿಜಿ ಭದ್ರತೆ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡ್ತಿರೋದೇ ಕಾರಣ ಅಂತ ಶಾಂತಿನಗರ ಶಾಸಕ ಎನ್​​.ಎ. ಹ್ಯಾರಿಸ್​​ ಆರೋಪ ಮಾಡಿದ್ದಾರೆ.


ಮಡಿಕೇರಿಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಪರ ಪ್ರಚಾರದ ವೇಳೆ ಮಾತನಾಡಿದ ಎನ್​.ಎ.ಹ್ಯಾರಿಸ್​ ಚಿಕ್ಕಂದಿನಿಂದ ಸೆಕ್ಯೂರಿಟಿಯಲ್ಲೇ ಬೆಳೆದ ರಾಹುಲ್ ಗಾಂಧಿ ಭದ್ರತೆ ಬಗ್ಗೆ ಮೋದಿ ಸರ್ಕಾರ ಗಮನ ಹರಿಸ್ತಿಲ್ಲ. ಆಗಾಗ ಅವರ ಸೆಕ್ಯೂರಿಟಿ ಕಡಿಮೆ ಮಾಡ್ತಿದೆ. ಹೀಗಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಗೃಹ ಇಲಾಖೆ ರಾಹುಲ್ ಗಾಂಧಿಗೆ ಸೂಕ್ತ ಭದ್ರತೆ ನೀಡಬೇಕು ಎಂದಿದ್ದಾರೆ.