ಸರ್ಕಾರ ಉರುಳಿಸುವ ಅತೃಪ್ತರ ಪ್ರಯತ್ನಕ್ಕೆ ಕಾಂಗ್ರೆಸ್​ ತಿರುಗೇಟು! ಕಣಕ್ಕಿಳಿದ ಟಬ್ರಲ್​ ಶೂಟರ್​ ಡಿಕೆಶಿ! ನೋ ಡೌಟ್,​​ ಸರ್ಕಾರ ಸೇಫ್​​!!

ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಅಸ್ತ್ರವನ್ನಿಟ್ಟುಕೊಂಡು ಮೈತ್ರಿ ಸರ್ಕಾರವನ್ನು ಹೆದರಿಸುವ ಪ್ರಯತ್ನ ಆರಂಭಿಸಿದ್ದರೇ, ಇನ್ನೊಂದೆಡೆ ಸರ್ಕಾರ ಉಳಿಸಿಕೊಳ್ಳಲು ಟ್ರಬಲ್​​ ಶೂಟರ್​ ಎಂಟ್ರಿಯಾಗಿದೆ. ಹೌದು ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗದಂತೆ ನೋಡಿಕೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ರಣಾಂಗಣಕ್ಕೆ ಧುಮುಕಿದ್ದಾರೆ.

ad

 


ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ನೀಡುತ್ತಿದ್ದಂತೆ ಸಮ್ಮಿಶ್ರ ಸರ್ಕಾರ ಅತಂತ್ರಕ್ಕೆ ಸಿಲುಕುವ ಮುನ್ಸೂಚನೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಫಿಲ್ಡ್​ಗಿಳಿದಿದ್ದು, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವು ಆಪ್ತರ ಜೊತೆ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.

ಅಲ್ಲದೇ ತಮ್ಮ ನಿವಾಸದಲ್ಲೇ ಕುಳಿತು ಅತೃಪ್ತರ ಮನವೊಲಿಕೆ ಯತ್ನ ನಡೆಸಿರುವ ಡಿಕೆಶಿ, ರಮೇಶ್ ಜಾರಕಿಹೊಳಿ, ಸೀಮಂತ್ ಪಾಟೀಲ್ ಹಾಗೂ ಹಲವು ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಯಾವುದೇ ಶಾಸಕರು ಕಾಂಗ್ರೆಸ್​ ತೊರೆಯದಂತೆ ನೋಡಿಕೊಳ್ಳಲು ರಣತಂತ್ರ ರೂಪಿಸಿದ್ದಾರೆ. ಜೊತೆಗೆ ಈ ಬಗ್ಗೆ ಚರ್ಚೆ ನಡೆಸಲು ಖುದ್ದು ಡಿಕೆಶಿ ಹಾಗೂ ಡಿಸಿಎಂ ಪರಮೇಶ್ವರ್ ಸಿಎಂ ನಿವಾಸಕ್ಕೆ ತೆರಳಿದ್ದಾರೆ.

ಒಟ್ಟಿನಲ್ಲಿ ಈ ಹಿಂದೆ 8 ಕ್ಕೂ ಹೆಚ್ಚು ಶಾಸಕರು ಬಂಡಾಯ ಎದ್ದಾಗಲೂ ಡಿಕೆಶಿ ಖುದ್ದು ಕಾರ್ಯಾಚರಣೆ ನಡೆಸಿ ಸರ್ಕಾರವನ್ನು ಅಪಾಯದಿಂದ ರಕ್ಷಿಸಿದ್ದರು. ಇದೀಗ ಮತ್ತೊಮ್ಮೆ ಟ್ರಬಲ್ ಶೂಟರ್​ ಆಗಿ ಕಣಕ್ಕಿಳಿದಿದ್ದು, ಸರ್ಕಾರ ಸುಭದ್ರವಾಗಿರಿಸುವ ಭರವಸೆ ಮೂಡಿದೆ.