ಸಾಲು ಸಾಲು ಸೋಲುಗಳ ನಂತರವೂ ಆರ್ ಸಿ ಬಿ ಯ ಪ್ಲೇಆಫ್ ಕನಸು ಇನ್ನೂ ಜೀವಂತ…!

ಈ ಸಲ ಕಪ್​ ನಮ್ಮದೇ, ಎಂಬ ಸ್ಲೋಗನ್​ ಜೊತೆ ಆರಂಭಗೊಂಡಿದ್ದ ಐಪಿಎಲ್​ ಸರಣಿಯಲ್ಲಿ ಅತಿ ಹೆಚ್ಚು ಚರ್ಚೆಗಿಡಾಗಿದ್ದು, ಆರ್​ಸಿಬಿಯ ಸಾಲು ಸಾಲು ಸೋಲುಗಳು. ಗೆಲ್ಲಬಹುದಾದ ಮ್ಯಾಚ್​​ಗಳನ್ನು ಸೋತು ಸುಣ್ಣವಾದ ಆರ್​ಸಿಬಿ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿ,ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಸೋಲುವಂತೆ ಮಾಡಿದೆ. ಇಷ್ಟಾದರೂ ಅಭಿಮಾನಿಗಳು ಕನಸು ಮಾತ್ರ  ಈ ಸಲ ಕಪ್​ ನಮ್ಮದೇ ಎನ್ನುತ್ತಿದೆ.

ad

ಐಪಿಎಲ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 16 ರನ್ ಅಂತರದ ಸೋಲಿಗೆ ಶರಣಾಗಿದ್ದರೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಪ್ರವೇಶಿಸಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ ಮತ್ತು ಆಸೆ. ಈ ಬಗ್ಗೆ ಈಗಲೂ ಚರ್ಚೆ ನಡೆದಿದ್ದು, ಅಭಿಮಾನಿಗಳ ನೀರಿಕ್ಷೆ ಸ್ವಲ್ಪವೂ  ಕಡಿಮೆಯಾಗಿಲ್ಲ.

ತಾಂತ್ರಿಕವಾಗಿ ಹೇಳಬೇಕೆಂದರೆ ಆರ್‌ಸಿಬಿ ಇನ್ನೂ ಟೂರ್ನಿಯಿಂದ ಹೊರಬಿದ್ದಿಲ್ಲ. ಅಲ್ಲದೆ ಅಂಕಿಅಂಶಗಳನ್ನು ಗಮನಿಸಿದಾಗ ಆರ್‌ಸಿಬಿಗೆ ಪ್ಲೇ-ಆಫ್ ತಲುಪಲು ಇನ್ನೂ ಅವಕಾಶವಿದೆ. ಅದಕ್ಕಾಗಿ ಉತ್ತಮ ರನ್‌ರೇಟ್‌ನೊಂದಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ಅಷ್ಟೇ ಅಲ್ಲದೆ ಇತರೆ ಪಂದ್ಯಗಳ ಫಲಿತಾಂಶಗಳು ಆರ್‌ಸಿಬಿಗೆ ಪೂರಕವಾಗಿರಬೇಕು.

ಹೈದರಾಬಾದ್ ಹಾಗೂ ಪಂಜಾಬ್ ಬಳಿಯೀಗ 11 ಪಂದ್ಯಗಳಲ್ಲಿ 10 ಅಂಕಗಳಿದ್ದು ಅಂಕಪಟ್ಟಿಯಲ್ಲಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ. ಅಂದರೆ ಮುಂದಿನ ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಷ್ಟೇ ಗೆಲ್ಲಬೇಕಿದೆ. ಅಂತಹ ಪರಿಸ್ಥಿತಿಯಲ್ಲಿ ಗರಿಷ್ಠ 12 ಅಂಕ ಸಂಪಾದಿಸಲಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಸೋಮವಾರ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ಹಾಗೂ ಪಂಜಾಬ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಹಾಗಾಗಿ ಇತ್ತಂಡಗಳ ಪೈಕಿ ಒಂದು ತಂಡ 12 ಅಂಕಗಳನ್ನು ಕಲೆ ಹಾಕಲಿದೆ. ಆದರೆ ಈ ಮೊದಲೇ ತಿಳಿಸಿರುವಂತೆಯೇ ಈ ಎರಡು ತಂಡಗಳು ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದರೆ ಆರ್‌ಸಿಬಿಗೆ ಇನ್ನೂ ಅವಕಾಶವಿದೆ.

ಅತ್ತ ರಾಜಸ್ಥಾನ್ 12 ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿದೆ. ಹಾಗಾಗಿ ಇನ್ನೊಂದು ಪಂದ್ಯ ಗೆದ್ದರೆ ಆರ್‌ಸಿಬಿಗೆ ಅಡ್ಡಿಯಿಲ್ಲ.ಇನ್ನು ಕೆಕೆಆರ್ 11 ಪಂದ್ಯಗಳಲ್ಲಿ ಎಂಟು ಅಂಕಗಳನ್ನು ಕಲೆ ಹಾಕಿದೆ. ಅಂದರೆ ಮುಂದಿನ ಮೂರು ಪಂದ್ಯಗಳಲ್ಲಿ ಗರಿಷ್ಠ ಎರಡು ಪಂದ್ಯಗಳನ್ನು ಗೆದ್ದರೂ ಆರ್‌ಸಿಬಿಗೆ ಅವಕಾಶವಿರುತ್ತದೆ.ಇನ್ನೊಂದೆಡೆ ಅಗ್ರ ಮೂರು ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತನ್ನೆಲ್ಲ ಪಂದ್ಯಗಳಲ್ಲಿ ಗೆದ್ದರೆ ಆರ್‌ಸಿಬಿಗೆ ಪ್ಲೇ-ಆಫ್ ಕನಸು ಮತ್ತೆ ಚಿಗುರಲಿದೆ.