ಆ ಎರಡು ಭೀಕರ ರಸ್ತೆಗಳು ಅಪಘಾತಗಳು ಹೇಗಿತ್ತು ಗೊತ್ತಾ-ಮೈನಡುಗಿಸುವ ಈ ದೃಶ್ಯ ನೋಡಿ!

 

ರಸ್ತೆ ಅಪಘಾತಗಳು ನೋಡೋಕೆ ಸಾಧ್ಯವಾಗದಷ್ಟು ಭೀಕರವಾಗಿರುತ್ತವೆ. ಹೀಗೆ ಉಡುಪಿಯಲ್ಲಿ ಕೆಲವೇ ನಿಮಿಷದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳ ದೃಶ್ಯಾವಳಿ ಈಗ ವೈರಲ್​ ಆಗಿದೆ. ಉಡುಪಿಯ ನಿಟ್ಟೂರು ಬಾಳಿಗಾ ಫಿಶ್ ನೆಟ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸೆಪ್ಟೆಂಬರ್ ೪ರಂದು ನಡೆದ‌ ಭೀಕರ ಅಪಘಾತಗಳಾಗಿದೆ. ಮಧ್ಯಾಹ್ನ ಒಂದು ಗಂಟೆ ಹಾಗೂ ಮೂರು ಗಂಟೆಗೆ ಈ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದೆ. ಈ ಎರಡು ಅಪಘಾತದಲ್ಲಿ ನಾಲ್ಕು ಮಂದಿ ಗಾಯಾಳು ಬೈಕ್‌ ಸವಾರರ ಪೈಕಿ ಓರ್ವ ಯುವಕ ಮೃತಪಟ್ಟಿದ್ದಾನೆ.

ಉಡುಪಿಯ ರಜಿತ್ ಕುಮಾರ್ ಮೃತ ದುರ್ದೈವಿ. ಮೊದಲ ಅಪಘಾತದಲ್ಲಿ ಮೃತ‌ ರಜಿತ್ ಸತೀಶ್ ಅವರೊಂದಿಗೆ ಸಹಸವಾರನಾಗಿದ್ದು ಇವರಿದ್ದ ಬೈಕ್ ರಸ್ತೆ ದಾಟುವಷ್ಟರಲ್ಲೇ ಕರಾವಳಿಯಿಂದ ಸಂತೆಕಟ್ಟೆ ಕಡೆ ತೆರಳುತ್ತಿದ್ದ ಟಾಟಾ ಸುಮೋ ಡಿಕ್ಕಿ‌ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರರಾದ‌ ಸತೀಶ್ ಹಾಗೂ ರಜಿತ್ ಹಾರಿಹೋಗಿದ್ದಾರೆ. ಸತೀಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ್ರೆ ಸಹಸವಾರ ರಂಜಿತ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಈ ಅಪಘಾತ‌ ನಡೆದ ಕೆಲವೇ ಗಂಟೆಯಲ್ಲೇ ಮೊದಲು ನಡೆದ ಅಪಘಾತ ನಡೆದ ಸ್ಥಳದಲ್ಲೇ ಬೈಕ್‌ ಹಾಗೂ ಚೆವರ್ಲೆಟ್ ಸ್ಪಾರ್ಕ್ ಕಾರು ನಡುವೆ ಮೊದಲ ಅಪಘಾತ ನಡೆದ ರೀತಿಯಲ್ಲೇ

ಅಪಘಾತ ನಡೆದಿದೆ. ರಾಘವೇಂದ್ರ ಭಟ್ ಹಾಗೂ ಕೃಷ್ಣಮೂರ್ತಿ‌ ಇವರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಎರಡು ಅಪಘಾತದ ಪ್ರಕರಣ ಉಡುಪಿ‌ ಸಂಚಾರಿ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದೆ. ಬಾಳಿಗಾ ಫಿಶ್ ನೆಟ್ ಬಳಿ‌ ಹಾದು‌ ಹೋಗುವ ಎನ್ ಎಚ್ ೬೬ ರಲ್ಲಿ‌ ಈ ಹಿಂದೆ ರಸ್ತೆ ದಾಟುತ್ತಿದ್ದ ಬೈಕ್‌ಸವಾರರಿಗೆ ಬಹಳಷ್ಟು ಅಪಘಾತ ನಡೆದಿದ್ದು. ರಾಷ್ಟ್ರೀಯ ಹೆದ್ದಾರಿ‌೬೬ರ‌ ಈ ಜಂಕ್ಷನ್ ಅಪಾಯಕಾರಿಯಾಗಿದ್ದು ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ಕೇಳಿ‌ಬಂದಿದೆ.