ಸಚಿವರ ಕ್ವಾಟರ್ಸ್​ನಲ್ಲೇ ಕಳ್ಳತನ- ಇಷ್ಟಕ್ಕೂ ಚೋರರು ಕದ್ದಿದ್ದೇನು ಗೊತ್ತಾ?!

ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಿ ಪೊಲೀಸರ ನಿದ್ದೆಗೆಡಿಸಿರುವ ಬೆನ್ನಲ್ಲೇ ನಗರದಲ್ಲಿ ಜನಸಾಮಾನ್ಯರು ಮಾತ್ರವಲ್ಲ ವಿಐಪಿಗಳು ಸುರಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಸಚಿವರ ನಿವಾಸಗಳೂ ಸೇಫಲ್ಲ. ಕಳೆದ ರಾತ್ರಿ ರೇಸ್​ ಕೋರ್ಸ್​ ರಸ್ತೆಯ 7 ಮಿನಿಸ್ಟರ್ ಕ್ವಾಟ್ರಸ್​ ಆವರಣದಲ್ಲಿದ್ದ ಗಂಧದ ಮರ ಕಳ್ಳತನವಾಗಿದೆ.

ad


ಖದೀಮರು ಶ್ರೀಗಂಧದ ಮರಕ್ಕೆ ಕನ್ನ ಹಾಕಿದ್ದಾರೆ. ಎರಡು ಗಂಧದ ಮರಗಳನ್ನ ಚೋರರು ಕತ್ತರಿಸಿಕೊಂಡು ಹೋಗಿದ್ದಾರೆ. ಮಾಜಿ ಸಚಿವ ಜಯಚಂದ್ರಗೆ 6ನೇ ನಂಬರ್​​ನ ಕ್ವಾಟ್ರಸ್​ ನೀಡಲಾಗಿತ್ತು. ಆದ್ರೆ ಈಗ ಅಲ್ಲಿ ಯಾರೂ ವಾಸ ಮಾಡ್ತಿಲ್ಲ. ಪೊಲೀಸ್ ಕಣ್ಗಾವಲಿದ್ದರೂ 30 ವರ್ಷ ಹಳೆಯ ಭಾರೀ ಗಾತ್ರದ ಮರ ಕಳವು ಮಾಡಲಾಗಿದೆ. ಪಕ್ಕದಲ್ಲೇ ರಮೇಶ್​ ಜಾರಕಿಹೊಳಿ ಸೇರಿದಂತೆ ಹಲವರ ಕ್ವಾಟ್ರಸ್​ಗಳಿವೆ.
ಸಚಿವರ ನಿವಾಸಗಳಿಗೆ ಹಗಲು-ರಾತ್ರಿ ಕಾವಲು ಇರುತ್ತದೆ. ಆದರೂ ಚೋರರು ಕೈಚಳಕ ತೋರಿಸಿದ್ದಾರೆ. ಭಾರೀ ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ನಗರದ ಹಲವೆಡೆ ಈ ರೀತಿ ಶ್ರೀಗಂಧದ ಮರಗಳ ಕಳ್ಳತನ ಮತ್ತೆ ಆರಂಭವಾಗಿದ್ದು, ಪೊಲೀಸರು ಕಂಗೆಟ್ಟು ತನಿಖೆ ಆರಂಭಿಸಿದ್ದಾರೆ.