ನೀವೆಲ್ಲೂ ನೋಡಿರದ ಡಿಫ್ರೆಂಟ್ ಊರಿದು…ಇಲ್ಲಿಂದ ಮಂಚ ಹಾಗೂ ತೊಟ್ಟಿಲು ಬೇರೆ ಊರಿಗೆ ಹೋಗೊ ಹಾಗಿಲ್ಲ, ತರೋಹಾಗಿಲ್ಲ!!

ಸಾಮಾನ್ಯವಾಗಿ ಮದುವೆ ಹಾಗೂ ನಾಮಕರಣ ಇದ್ದಾಗ ಸಂಬಂಧಿಕರ ಮನೆಗೆ ಮಂಚ‌, ತೊಟ್ಟಿಲುಗಳನ್ನ ಕೊಡುವುದು ಅಥಾವ ಇಸ್ಕೊಳೊದು ಸಾಮಾನ್ಯ. ಆದರೆ ಕಲಬುರಗಿ ಜಿಲ್ಲೆ ಆಳಂದ‌ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಂಬಾಕ್‌ವಾಡಿ ಗ್ರಾಮದಲ್ಲಿ ಮಾತ್ರ ಮದುಮಗಳಿಗೆ ಮಂಚ ಕೊಡೊದಿಲ್ಲ..ಮಗಳು ಹೆರಿಗೆಗೆ ಅಂತಾ ಬಂದು, ಪುನಃ ಗಂಡನ ಮನೆಗೆ ಹೋಗೊವಾಗ ಅವಳಿಗೆ ತೊಟ್ಟಿಲನ್ನ‌ ನೀಡುವುದಿಲ್ಲ.

ad


ಅಷ್ಟೆ ಅಲ್ಲದೇ ಈ ಊರಿಗೆ ಬರೋ ಸೊಸೆಯಿಂದ ಮಂಚ ಮತ್ತು ತೊಟ್ಟಿಲುಗಳನ್ನ ಸಹ ಪಡೆಯುವುದಿಲ್ಲ.. ಆದರೆ ಈ ಊರಲ್ಲಿ ಪಲ್ಲಂಗಗಳು ಹಾಗೂ ತೊಟ್ಟಿಲುಗಳಿಲ್ಲ ಅಂತಾ ಇಲ್ಲಾ..ಪ್ರತಿಯೊಬ್ಬರ ಮನೆಯಲ್ಲಿ ಪಲ್ಲಂಗಗಳು ಹಾಗೂ ತೊಟ್ಟಿಲುಗಳಿವೆ.. ಆದರೆ ಇದ್ಯಾವುದೂ ಬೇರೆ ಊರಿಂದ ತಂದಿರೋದು ಅಲ್ಲಾ.. ಇದಕ್ಕೆಲ್ಲ ಹಾಗೂ ವಿಶಿಷ್ಟ ಪದ್ದತಿಗೆ ಕಾರಣ ಗ್ರಾಮದ ಆರಾಧ್ಯ ದೇವತೆಯಾದ ಜಕ್ಕಮ್ಮದೇವಿ ಅಂತೆ.

ಹೌದು ಗ್ರಾಮದಿಂದ ಪಲ್ಲಂಗವಾಗಲಿ ಅಥಾವ ತೊಟ್ಟಿಲುಗಳಾಗಲಿ ಊರ ಆಚೆ ಹೋದರೆ ಜಕ್ಕಮ್ಮದೇವಿ ಗ್ರಾಮ ಬಿಟ್ಟು ಹೊರಹೋಗ್ತಾಳೆ ಅನ್ನೊ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಈ ಹಿಂದೆ ಈ ಪದ್ದತಿ ಮೀರಿ ಗ್ರಾಮದ ಓರ್ವರು ಮಗಳ ಮದುವೆಗೆ ಮಂಚ‌ ಕೊಡಲು ಖರೀಧಿಸಿ ಇಟ್ಟಿದ್ದರಂತೆ..ಆದರೆ ಮದುವೆಗೂ ಮುನ್ನವೇ ಆ ಅವರ ಮನೆಯಲ್ಲಿ ಸಾವು ಸಂಭವಿಸಿ ಮದುವೆನೆ ಮುರಿದು ಬಿತ್ತಂತೆ.. ಊರಿನ ಸಂಪ್ರದಾಯ ಪಾಲಿಸದಿದ್ದಲ್ಲಿ ದೇವಿಯ ಕೆಂಗಣ್ಣಿಗೆ ಗುರಿಯಾಗುತ್ತೆ, ದೇವಿ ತಕ್ಕಶಾಸ್ತಿ ಮಾಡ್ತಾಳೆ ಅನ್ನೊ ಬಲವಾದ ನಂಬಿಕೆ ಈ ಊರಿನ ಹಿರಿಯರಲ್ಲಿದೆ.. ಮದುವೆಗೆ ಮಂಚ ಕೊಡದೇ ಇದ್ದಲ್ಲಿ ವರ ಸಿಟ್ಟಾಗ್ತಾನೆ ಅಂತಾ ತಿಳಿದಿಯೇ, ಮದುವೆಗೂ ಮುನ್ನ ನಡೆಯುವ ಮಾತುಕತೆಯಲ್ಲಿ ಈ ತಂಬಾಕವಾಡಿ ಗ್ರಾಮದ ಪದ್ದತಿಯನ್ನ ಹೇಳೆ ಸಂಬಂಧ ಬೆಳೆಸುತ್ತಾರೆ‌‌..