ಪುಸ್ತಕ ಕೇಳಲು ಬಂದ ಸ್ಟುಡೆಂಟ್​ನ್ನು ಹತ್ತಿರಕ್ಕೆ ಕರೆದ ನಿರ್ದೇಶಕರು! ಇದು ಗ್ರಂಥಾಲಯ ಇಲಾಖೆ ಕಾಮಕಾಂಡ!!

ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕರ ಕರ್ಮಕಾಂಡವೊಂದು ಬಯಲಿಗೆ ಬಂದಿದೆ. ಪುಸ್ತಕ ಕೇಳಲು ಬಂದ ಯುವತಿಯೊಂದಿಗೆ ನಿರ್ದೇಶಕರು ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ನೊಂದ ಯುವತಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ad

ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ.ಸತೀಶ್​​ ಕುಮಾರ್ ಹೊಸಮನಿ ಅವರ ಬಳಿ ಮೇ 5 ರಂದು ವಿವಿ ಟವರ್​ನ ಗ್ರಂಥಾಲಯ ಕಚೇರಿಯಲ್ಲಿ ಯುವತಿಯೊಬ್ಬರು ಅಗತ್ಯ ಪುಸ್ತಕಗಳನ್ನು ತೆರಳಿದ್ದರು ಎನ್ನಲಾಗಿದೆ. ಈ ವೇಳೆ 19 ವರ್ಷದ ಆ ಯುವತಿ ಮೇಲೆ ದೌರ್ಜನ್ಯ ಮೆರೆದ ಸತೀಶ್​ ಕುಮಾರ್ ಹೊಸಮನಿ, 300 ಅಲ್ಲಾ 500 ಪುಸ್ತಕ ಬೇಕಾದರೂ ಕೊಡುತ್ತೇನೆ ಆದರೆ ನೀನು ನನ್ನ ಬಳಿ ಒಬ್ಬಳೆ ಬರಬೇಕು ಎಂದಿದ್ದಾರೆ ಎನ್ನಲಾಗಿದೆ.


ಇದರಿಂದ ನೊಂದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಡಾ.ಸತೀಶ್ ಕುಮಾರ್ ಹೊಸಮನಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಎಫ್​ಐಆರ್ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ ತಮ್ಮ ವಿರುದ್ಧ ದೂರು ನೀಡಿರುವ ವಿದ್ಯಾರ್ಥಿನಿ ವಿರುದ್ಧ ಡಾ.ಸತೀಶ್ ಕುಮಾರ್ ಕೂಡ ಪ್ರತ್ಯಾರೋಪ ಮಾಡಿದ್ದು, ವಿದ್ಯಾರ್ಥಿನಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಪ್ರತಿದೂರು ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಬಳಿಕ ಪ್ರಕರಣದ ಸತ್ಯಾಸತ್ಯ ಬೆಳಕಿಗೆ ಬರಬೇಕಿದೆ.