ನಾಳೆ ಬಂದ್ ಗೆ ನಿಜವಾದ ಕಾರಣ ಇದು !! ಬಂದ್ ನ ಮಜಾ ಅನುಭವಿಸುವವರು ಓದಲೇಬೇಕಾದ ಸುದ್ದಿ ಇದು !!

 


ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ಬಡವರ ಮೇಲಾಗಿರುವ ಆರ್ಥಿಕ ಹೊರೆ ಆಗುತ್ತಿರುವುದನ್ನು ಖಂಡಿಸಿ ಅನಿವಾರ್ಯವಾಗಿ ಸೆ.10 ರಂದು ಭಾರತ್ ಬಂದ್ ನಡೆಸಲು ಮುಂದಾಗಿದ್ದೇವೆ ಎಂದು ಬಂದ್ ಘೋಷಿಸಿರೋ ಸಂಘಟನೆಗಳು ತಿಳಿಸಿವೆ.ಮೋದಿ ಸರಕಾರದಷ್ಟು ಅತ್ಯಂತ ಭ್ರಷ್ಟ, ನೀತಿಗೆಟ್ಟ ಸರ್ಕಾರ ಇನ್ನೊಂದಿಲ್ಲ. ತಮ್ಮ ತತ್ವ ಸಿದ್ಧಾಂತಕ್ಕೆ ಬದ್ಧವಲ್ಲದ ಎಲ್ಲಾ ವರ್ಗದ ಜನರಿಗೂ ಕಿರುಕುಳ ನೀಡುವ, ದಬ್ಬಾಳಿಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸದೇ ರಾಜಕೀಯ ಹುನ್ನಾರ, ಷಡ್ಯಂತ್ರ ನಡೆದಿ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ. ಸೋಮವಾರದ ನಮ್ಮ ಬಂದ್ ಬೆಳಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೆ ಬಂದ್ ಗೆ ಕರೆ ಕೊಟ್ಟಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಸದಂತೆ ಕರೆ ಕೊಟ್ಟಿದ್ದೇವೆ. ಅನೇಕ ಸಂಘಟನೆಗಳು, ಎಡಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ನಿನ್ನೆಯಷ್ಟೇ ದಿನೇಶ್ ಗುಂಡೂರಾವ್ ಹೇಳಿದ್ದರು.

ನಾಳಿನ ಬಂದ್ ಗೆ ಈ ರೀತಿ ಕಾರಣಗಳನ್ನು ಸಂಘಟನೆಗಳು ಮತ್ತು ಪಕ್ಷಗಳು ಪಟ್ಟಿ ಮಾಡಿವೆ. ಮೋದಿ ಸರ್ಕಾರ 11 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವುದಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ಗಳಿಗೆ ತೆರಿಗೆ ಏನು ವಿಧಿಸುತ್ತಿದೆ. ಕಳೆದ 52 ತಿಂಗಳಲ್ಲಿ ಈ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ಜನರ ಜನಸಾಮಾನ್ಯರನ್ನು ಘಾಸಿಗೊಳಿಸಲಾಗಿದೆ. 2014 ರ ಮೇ 16 ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ ಗೆ 107.09 ಡಾಲರ್ ಇದ್ದಿದ್ದು ಈಗ 73 ಡಾಲರ್ ಗೆ ಇಳಿದಿದೆ. ಅಂದರೆ ಶೇ.40 ಮೇಲೆ ಕಡಿಮೆಯಾದರೂ ಕೂಡ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುತ್ತಲೇ ಬಂದಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2014 ಮೇ 16 ರಂದು ಪೆಟ್ರೋಲ್ ಬೆಲೆ 71.41 ಡಾಲರ್ ಇತ್ತು 2018 ರ ಸೆಪ್ಟೆಂಬರ್ 6 ಕ್ಕೆ ಇದು 79.51 ಡಾಲರ್ ಆಗಿದೆ ಅಲ್ಲಿಗೆ ಕೇವಲ 8.1 ಡಾಲರ್ ನಷ್ಟು ಮಾತ್ರ ಏರಿಕೆ ಆಗಿದೆ. ಆದರೆ ಪೆಟ್ರೋಲ್ ಬೆಲೆ 82 ರುಪಾಯಿ ಮೀರಿದೆ. ಇದು ಕೇವಲ 52 ತಿಂಗಳಲ್ಲಿನ ಬೆಲೆ ವ್ಯತ್ಯಾಸ. ಡೀಸೆಲ್ ವಿಚಾರಕ್ಕೆ ಬಂದರೆ 2014 ಮೇ 16 ರಂದು ಡೀಸೆಲ್ ಬೆಲೆ 55.49 ಡಾಲರ್ ಇತ್ತು 2018 ರ ಸೆಪ್ಟೆಂಬರ್ 6 ಕ್ಕೆ ಇದು 71.55 ಡಾಲರ್ ಆಗಿದೆ ಅಲ್ಲಿಗೆ ಕೇವಲ 16.06 ಡಾಲರ್ ನಷ್ಟು ಮಾತ್ರ ಏರಿಕೆ ಆಗಿದೆ.

ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ 2014 ಮೇ ತಿಂಗಳಿಂದ ಶೇಕಡಾ 211.7 ರೂ ಗೆ ಏರಿಕೆ ಯಾಗಿದೆ. 2014 ಮೇ 14 ರಲ್ಲಿ9.2 ರೂಪಾಯಿ ಪ್ರತಿಲೀಟರ್ ಗೆ ಇದ್ದ ತೆರಿಗೆ ಇದೀಗ 19.48 ರೂಪಾಯಿ ಆಗಿದೆ. ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಶೇಕಡಾ 443.6 ಆಗಿದೆ. ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಪ್ರತಿ ಲೀಟರಿಗೆ 3.46 ರು ಇದ್ದದ್ದು 15.33 ರೂ ಆಗಿದೆ. ಕೇಂದ್ರದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 12 ಬಾರಿ ಕೇಂದ್ರ ಅಬಕಾರಿ ತೆರಿಗೆ ಏರಿಸಲಾಗಿದೆ. 2014 ನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ಗುರು ಇದ್ದದ್ದು, ಇಂದು 754 ಕ್ಕೆ ಏರಿದೆ. ಪ್ರತಿ ಸಿಲಿಂಡರ್ ಬೆಲೆ 340 ರೂಪಾಯಿ ಹೆಚ್ಚಾಗಿದೆ ಎಂದು ಪಟ್ಟಿ ಮಾಡಿದ್ದಾರೆ.

ಭಾರತೀಯರು ಇಷ್ಟು ದುಬಾರಿ ಬೆಲೆ ಕೊಟ್ಟು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುತ್ತಿದ್ದರೆ, ಮೋದಿ ಸರ್ಕಾರ ಪ್ರತಿ ಲೀಟರಿಗೆ 34 ರೂಪಾಯಿ ನಂತೆ 15 ದೇಶಗಳಿಗೆ ಡೀಸೆಲ್ ಹಾಗೂ 37 ರೂನಂತೆ 29 ರಾಷ್ಟ್ರಗಳಿಗೆ ಪೆಟ್ರೋಲ್ ರಫ್ತು ಮಾಡುತ್ತಿದೆ. ಯುಪಿಎ ಸರ್ಕಾರ ಹಾಗೂ ಎನ್ಡಿಎ ಸರ್ಕಾರ ನಡುವಿನ ವ್ಯತ್ಯಾಸವನ್ನು ಗಮನಿಸಿದರೆ ಪೆಟ್ರೋಲ್ 70 ರೂ ಇದ್ದು 80 ರೂ ಆಗಿದೆ, ಡೀಸೆಲ್ 55 ರೂ ಇದ್ದದ್ದು 70 ರೂ ಆಗಿದೆ, ಅಡಿಗೆ ಅನಿಲ 400 ರೂ. ಇದ್ದದ್ದು 754 ಆಗಿದೆ. ಅದೇ ರೀತಿ ಹಾಲು ಪ್ರತಿ ಲೀಟರ್ ಗೆ 40 ರೂ ಇದ್ದದ್ದು 52 ರೂ, ಬೇಳೆ 70 ರೂ ಇದ್ದದ್ದು 170 ರೂ., ರೈಲು ದರ 6 ರೂಪಾಯಿ ಪ್ರತಿ ಕಿಮಿಗೆ ಇದ್ದದ್ದು 9 ರೂ. ಹಾಗೂ ಪ್ಲಾಟ್ ಫಾರಂ ಟಿಕೆಟ್ ಮೂರು ರೂಪಾಯಿ ಇದ್ದದ್ದು 20 ರೂ ಮಾಡಲಾಗಿದೆ ಎಂದು ಬಂದ್ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Avail Great Discounts on Amazon Today click here