ಆ ಮಹಾಸ್ವಾಮಿ ಲವ್ವಿ ಡವ್ವಿಯ ಫೋಟೋ ಫುಲ್​ ವೈರಲ್​

ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠದ ಕೊಟ್ಟೂರು ಮಹಾಸ್ವಾಮಿಜೀ ಲವ್ವಿ ಡವ್ವಿಯ ಫೋಟೋಗಳು ಮತ್ತೆ ವೈರಲ್​ ಆಗಿವೆ. ಈ ಹಿಂದೆ ಹುಬ್ಬಳ್ಳಿಯ ಲಾಡ್ಜ್​ವೊಂದರಲ್ಲಿ ಸ್ವಾಮೀಜಿ ಮಹಿಳೆಯೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಸ್ವಲ್ಪ ದಿನ ಸುಮ್ಮನಿದ್ದ ಸ್ವಾಮೀಜಿ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ.

ಭವಿಷ್ಯ ಹೇಳುವ ನೆಪದಲ್ಲಿ ಸ್ವಾಮೀಜಿ ತನ್ನ ಸೀಕ್ರೇಟ್​ ರೂಂಗೆ ಹೆಣ್ಣುಮಕ್ಕಳನ್ನು ಕರೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ಸ್ವಾಮೀಜಿ ವರ್ತನೆಯಿಂದ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಅದಲ್ಲದೇ ಶಾಸಕ ಪರಣ್ಣ ಮುನವಳ್ಳಿ ಈ ಕಲ್ಪಠದ ಕೊಟ್ಟೂರ ಮಹಾಸ್ವಾಮಿಯನ್ನು ತೊಲಗಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.