ಆ ಪೋಲೀಸ್ ಠಾಣೆಯಲ್ಲಿ ಇಂದು ಸಂಭ್ರಮದ ವಾತಾವರಣ. ಅದಕ್ಕೆ ಕಾರಣವೇನು ಗೊತ್ತಾ?

ಪೊಲೀಸರೆಂದರೆ ದಿನದ 24 ಗಂಟೆಯೂ ಕೆಲಸ ಮಾಡುವವರು. ಇಂತವರಿಗೆ ಸಮಯವೇ ಇರುವುದಿಲ್ಲ. ಇದರ ನಡುವೆಯೂ ಇಬ್ಬರು ಮಹಿಳಾ ಪೇದೆಗಳಿಗೆ ಠಾಣೆಯಲ್ಲೇ ಸೀಮಂತ ಮಾಡಿದ ಅಪರೂಪದ ಪ್ರಸಂಗ ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಹೌದು, ಕಳೆದ ಕೆಲ ದಿನಗಳ ಹಿಂದೆ ಪಾಂಡವಪುರದ ಮಹಿಳಾ ಪಿಎಸ್‌ಐಗೆ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿದ್ದರು.

ad

ಅದೇ ರೀತಿ ಮಳವಳ್ಳಿಯ ಪೊಲೀಸರು ಕೂಡ ತಮ್ಮ ಠಾಣೆಯ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಮಳವಳ್ಳಿ ಠಾಣೆಯಲ್ಲಿ ಕೆಲಸ ಮಾಡೋ ಪ್ರೇಮಾ ಮತ್ತು ಶೃತಿ ಅವರಿಗೆ ಠಾಣೆಯ ಸಿಬ್ಬಂದಿ ತಮ್ಮ ಸ್ವಂತ ಸಹೋದರಿಯರಿಗೆ ಮಾಡೋ ರೀತಿಯಲ್ಲಿ ಸೀಮಂತ ಕಾರ್ಯ ಮಾಡಿ ಸಂಭ್ರಮಪಟ್ಟರು. ಇಬ್ಬರಿಗೂ ಚೊಚ್ಚಲ ಹೆರಿಗೆ ಆಗಿದ್ದು, ಎಲ್ಲರೂ ಧೈರ್ಯ ನೀಡಿದರು.


ಪ್ರೇಮ ಮತ್ತು ಶೃತಿಗೆ ಅರಿಶಿಣ ಕುಂಕಮ ಕೊಟ್ಟು, ಮಡಿಲಕ್ಕಿ ತುಂಬಿ, ಹಣ್ಣನ್ನು ಕೊಟ್ಟು ಸೀಮಂತ ಮಾಡಲಾಯಿತು. ಒಟ್ಟಿನಲ್ಲಿ ಠಾಣೆಯ ಸಿಬ್ಬಂದಿಯ ಈ ಕಾರ್ಯ ನಾಗರೀಕರ ಪ್ರಶಂಸೆಗೆ ಕಾರಣವಾಯಿತು. ಈ ಸಂಧಭರ್ದಲ್ಲಿ ಡಿವೈಎಸ್‌ಪಿ ಮಲ್ಲಿಕ್, ಸಿಪಿಐಗಳಾದ ಗಂಗಾಧರ್, ಶ್ರೀಕಾಂತ್, ಪಿಎಸ್‌ಐ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿರೋ ಮೂಲಕ ಸಂಭ್ರಮಕ್ಕೆ ಕಾರಣರಾದರು