ಬಂಧನದ ಭೀತಿಯಲ್ಲಿ ಮೂವರು ಪ್ರಮುಖ ನಾಯಕರು !! ಎಚ್ ಡಿಕೆ ಮತ್ತು ಡಿ ಕೆ ಸುರೇಶ್ ಗೆ ಗೊತ್ತಿರೋದೇನು ?

 

ad


ಸರಕಾರ ಆಭದ್ರತೆಯನ್ನು ಎದುರಿಸುತ್ತಿದ್ದು ಸರಕಾರ ಉರುಳಿಸಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ ಎಂದು ರಾಜ್ಯ ಸರಕಾರವೇ ಹೇಳಿಕೊಂಡಿದೆ. ಮೂವರು ಪ್ರಮುಖ ನಾಯಕರ ಬಂಧಿಸೋದು ಮತ್ತು ಏಳು ಕೈ ಶಾಸಕರನ್ನು ತನ್ನತ್ತ ಸೆಳೆಯುವುದು ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಎಂಬ ಭಯಾನಕ ಸತ್ಯ ಇದೀಗ ಸರಕಾರಕ್ಕೆ ಮನವರಿಕೆಯಾಗಿದೆ.

 

 

ರಾಜ್ಯ ಸರಕಾರ ಪತನವಾಗುತ್ತೆ ಅಂತ ಸಮ್ಮಿಶ್ರ ಸರಕಾರ ನೂರು ದಿನ ಪೂರೈಸಿದಾಗಲೇ ಚರ್ಚೆಯಿತ್ತು. ಆಗೆಲ್ಲಾ ಇದೆಲ್ಲಾ ಊಹಾಪೋಹದ ಸುದ್ದಿಗಳು ಎನ್ನುತ್ತಿದ್ದ ಕಾಂಗ್ರೆಸ್ ಜೆಡಿಎಸ್ ನಾಯಕರು ಈಗ ಸರಕಾರ ಕುಸಿಯುವ ಆತಂಕದಲ್ಲಿದ್ದಾರೆ. ಒಂದು ಕಡೆಯಲ್ಲಿ ಸಮ್ಮಿಶ್ರ ಸರಕಾರದ ಬೆನ್ನೆಲುಬಾಗಿರುವ ಡಿ ಕೆ ಶಿವಕುಮಾರ್ ರನ್ನು ಈ ಮೂಲಕ ಬಂಧಿಸಲು ಯತ್ನಿಸಿ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈ ಮದ್ಯೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿನ್ನೆ ದೆಹಲಿ ಹೋಗಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬೆಳಿಗ್ಗೆ ದಿಡೀರನೆ ಬೆಂಗಳೂರಿಗೆ ಮರಳಿದ್ದು ಸಮ್ಮಿಶ್ರ ಸರಕಾರಕ್ಕೆ ಶಾಕ್ ನೀಡಿತ್ತು. ಸರಕಾರ ಉರುಳಿಸಲು ಬಿಜೆಪಿ ಸಿದ್ದವಾಗಿದ್ದು, ಅದಕ್ಕಾಗಿ ಯಾವ ಮಟ್ಟಕ್ಕೂ ಹೋಗುತ್ತದೆ. ಅದಕ್ಕಾಗಿ ಬಿ ಎಸ್ ವೈ ದೆಹಲಿಯಿಂದ ಬೆಂಗಳೂರಿಗೆ ಮರಳಿರಬಹುದು ಎಂದು ಖುದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ

ಬಿಜೆಪಿ ಈ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ರಮೇಶ್ ಜಾರಕಿಹೋಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಿರಸವನ್ನು ನಗದೀಕರಿಸಲು ಬಿಜೆಪಿ ಸಿದ್ದತೆ ನಡೆಸಿತ್ತು. ಬಿಜೆಪಿ ಏಳು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದು ಅವರಿಗೆ ಹಣ ಮತ್ತು ಅಧಿಕಾರದ ಅಮಿಷ ತೋರಿಸಿದ್ದರೆ ಮೂವರು ಪ್ರಮುಖ ನಾಯಕರನ್ನು ಬಂಧಿಸುವ ಟಾರ್ಗೆಟ್ ಮಾಡಿಕೊಂಡಿದೆ ಎಂದು ಖುದ್ದು ಡಿ ಕೆ ಸುರೇಶ್ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರಕಾರ ಬಿದ್ದು ಹೋಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಒಟ್ಟಾರೆ ಸರಕಾರ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತದೆ. ಒಂದಷ್ಟು ಪ್ರಮುಖ ನಾಯಕರು ಬಂಧನದ ಭೀತಿ ಎದುರಿಸುತ್ತಿದ್ದರೆ, ಅದೇ ಸಂಧರ್ಭವನ್ನು ಬಳಕೆ ಮಾಡಿಕೊಂಡು ಏಳು ಕಾಂಗ್ರೆಸ್ ಶಾಸಕರನ್ನು ಅಪರೇಷನ್ ಕಮಲ ಮಾಡಲು ಬಿಜೆಪಿ ಸಿದ್ದತೆ ನಡೆಸುತ್ತಿದೆ. ಸಧ್ಯ ಸಮ್ಮಿಶ್ರ ಸರಕಾರ ಬಿಜೆಪಿಯ ದಿನಗಣನೆಯಲ್ಲಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ.