ಮಂಡ್ಯ ರೈತರನ್ನು ಉಳಿಸಲು ಕಾವೇರಿ ನೀರು ಬಿಡಿ! ಮೊದಲ ಭಾಷಣದಲ್ಲೇ ಹೋರಾಟದ ಮುನ್ನುಡಿ ಬರೆದ ಪ್ರಜ್ವಲ್ ರೇವಣ್ಣ!!

ಮಾಜಿ ಪ್ರಧಾನಿ ದೇವೆಗೌಡರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರೂ, ಪಾರ್ಲಿಮೆಂಟ್​ನಲ್ಲಿ ಅವರ ಹೋರಾಟಗಳಾಗಲಿ ಅಥವಾ ಧ್ವನಿಯಾಗಲಿ ಸೋತಿಲ್ಲ. ಹೌದು ದೇವೆಗೌಡರ ಕುಟುಂಬದ ಕುಡಿ ಹಾಗೂ ಯುವ ಸಂಸದ ಪ್ರಜ್ವಲ್ ರೇವಣ್ಣ ಮೊದಲ ಸಂಸತ್ತಿನ ಭಾಷಣದಲ್ಲೇ ನಾಡು-ನುಡಿ ಹೋರಾಟದ ಮುನ್ನುಡಿ ಬರೆದಿದ್ದು, ನಮಗೆ ನೀರು ಕೊಡಿ ಎನ್ನುವ ಮೂಲಕ ಕಾವೇರಿ ಹೋರಾಟಕ್ಕೆ ಜೀವ ತುಂಬಿದ್ದಾರೆ.

ad


ಮೊದಲ ಸಂಸತ್ತಿನ ಅಂಗವಾಗಿ ನೂತನ ಸಂಸದರು ಮಾತನಾಡುವ ವೇಳೆ 5 ನಿಮಿಷಗಳ ಕಾಲ ಮಾತನಾಡಿ ರಾಜ್ಯದ ಸಮಸ್ಯೆಗಳನ್ನು ಸಂಸತ್ತಿನ ಮುಂದೇ ಬಿಚ್ಚಿಟ್ಟ ಯುವ ಸಂಸದ ಪ್ರಜ್ವಲ್ ರೇವಣ್ಣ, ಮಂಡ್ಯದ ರೈತರು ನೀರಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವರೇ ಮಂಡ್ಯದ ರೈತರಿಗೆ 2 ಟಿಎಂಸಿ ನೀರು ಕೊಡಿ ಎಂದು ನೇರವಾಗಿ ಮನವಿ ಮಾಡಿದರು.


ಮಂಡ್ಯದ ಮತದಾರರ ಪರ ಸದನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ನಮಗೆ ನೀರು ಬೇಕು ಎಂದು ಉಗ್ರವಾಗಿ ವಾದ ಮಂಡಿಸಿದರು. ಈ ಹಿಂದಿನಿಂದಲೂ ದೇವೆಗೌಡರ ಕುಟುಂಬ ಸದನದಲ್ಲಿ ಕಾವೇರಿ ನೀರಿಗಾಗಿ ನಡೆಸಿದ್ದ ಹೋರಾಟವನ್ನು ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ನೆನಪಿಸಿದ್ದಾರೆ. ಅಲ್ಲದೇ ಹೋರಾಟಕ್ಕೆ ಬಲ ತುಂಬಿದ್ದಾರೆ. ಆ ಮೂಲಕ ಮಂಡ್ಯದ ಜನರಿಗಾಗಿ ದೇವೆಗೌಡರ ಕುಟುಂಬ ಹೋರಾಟ ಏನೆಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.