ನಾಳೆ ಎಸ್​ಎಸ್​ಎಲ್​ಸಿ ರಿಸಲ್ಟ್​​! ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸಲಿರುವ ಪ್ರೌಢಶಿಕ್ಷಣ ಮಂಡಳಿ!!

ಬಹುನೀರಿಕ್ಷಿತ ಎಸ್​ಎಸ್​ಎಲ್​ಸಿ ಫಲಿತಾಂಶ ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ರಾಜ್ಯ ಪ್ರೌಢಶಿಕ್ಷಣ ಮಂಡಳಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ್​ ಈ ಕುರಿತು ಮಾಹಿತಿ ನೀಡಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರೌಡಶಿಕ್ಷಣ ಮಂಡಳಿ ರಿಸಲ್ಟ್​ ಅನೌನ್ಸ್ ಮಾಡಲಿದೆ.

ad


ಬೆಳಗ್ಗೆ ಎಸ್​ಎಸ್​ಎಲ್​ಸಿ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೊಂದು ಸುತ್ತಿನ ಮೀಟಿಂಗ್ ನಡೆಸಿದ ಪ್ರೌಢಶಿಕ್ಷಣ ಮಂಡಳಿ ನಾಳೆ ಮಧ್ಯಾಹ್ನ ಫಲಿತಾಂಶ ಪ್ರಕಟಿಸಲು ತೀರ್ಮಾನಿಸಿದೆ.
ಮಾರ್ಚ್​​ 22 ರಿಂದ ಏಪ್ರಿಲ್​ 4 ರವರೆಗೆ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ನಾಳೆ 12 ಗಂಟೆಗೆ ಪ್ರೌಢಶಿಕ್ಷಣ ಮಂಡಳಿ ಫಲಿತಾಂಶ ಪ್ರಕಟಿಸಲಿದ್ದು, ಬಳಿಕ ಆಯಾ ಹೈಸ್ಕೂಲ್​ಗಳಲ್ಲಿ ಫಲಿತಾಂಶ ಲಭ್ಯವಾಗಿದೆ.

ಪ್ರೌಢಶಿಕ್ಷಣ ಮಂಡಳಿ ಫಲಿತಾಂಶ ಪ್ರಕಟಿಸಿದ ಕೆಲವೆ ಗಂಟೆಗಳಲ್ಲಿ Www.kaceb.kar.nic.in ಮತ್ತು Www.karresults.nic.in ಫಲಿತಾಂಶ ಲಭ್ಯವಾಗಲಿದೆ.