ನಾಳೆ ಇಂಡಿಯಾ ಇಂಗ್ಲೆಂಡ್ ವಿಶ್ವಕಪ್ ಸಮರ! ಭಾರತದ ಗೆಲುವಿಗಾಗಿ ಪಾಕ್ ಪ್ರಾರ್ಥನೆ!!

ನಾಳೆ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂನಲ್ಲಿ  ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಲಿದೆ. ಟೀಂ ಇಂಡಿಯಾದ ಗೆಲುವಿನ ನಾಗಲೋಟ ನಾಳೆ ಕೂಡ ಮುಂದುವರೆಯೋ ಮುನ್ಸೂಚನೆ ಇದೆ. ವಿಶೇಷ ಅಂದ್ರೇ ನಾಳೆ  ಭಾರತದ ಗೆಲುವಿಗೆ ಪಾಕ್​ ಕೂಡ ಪ್ರಾರ್ಥಿಸುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್.

ad

ಕ್ರಿಕೆಟ್​ ಪಂದ್ಯದ ವೇಳೆ ಇಂಡಿಯಾ ವಿನ್ ಆಗ್ಲಿ ಅಂತ ಭಾರತೀಯರು ಬೇಡಿಕೊಳ್ಳುವುದು ಕಾಮನ್. ಆದ್ರೆ  ನಾಳಿನ ಪಂದ್ಯವನ್ನು ಗಮನಿಸೋದಾದರೇ, ಪಾಕಿಸ್ತಾನ ಕೂಡ ಟೀಂ ಇಂಡಿಯಾ ನಾಳೆ ಮ್ಯಾಚ್ ವಿನ್ ಆಗ್ಲಿ ಅಂತ ಬೇಡಿಕೊಳ್ಳುತ್ತಿದ್ದಾರೆ.ಕಾರಣ ಇಷ್ಟೆ..ನಾಳೆ ಏನಾದ್ರು ಇಂಗ್ಲೆಂಡ್ ವಿನ್ ಆದ್ರೆ ಪಾಕಿಸ್ತಾನ ತಂಡ ವಿಶ್ವಕಪ್ ನಿಂದ ಹೊರಹೋಗೊ ಸಾದ್ಯತೆ ಇದೆ.

ನಾಳೆ ಇಂಗ್ಲೆಂಡ್ ವಿರುದ್ದ ಭಾರತ ವಿನ್ ಆದ್ರೆ ಸೆಮಿಫೈನಲ್ ಲಿಸ್ಟ್ ಸಲ್ಲಿ ಭಾರತ ತಂಡ ಇರೋದು ಪಕ್ಕಾ..ಅದೇ ಇಂಗ್ಲೆಂಡ್ ಈ ಪಂದ್ಯ‌ ಗೆದ್ದರೆ 10 ಪಾಯಿಂಟ್ ಗಳೊಂದಿಗೆ ಸೆಮಿಫೈನಲ್ ಗೆ ಹತ್ತಿರವಾಗುತ್ತೆ.ಆದ್ರೆ ವಿಪರ್ಯಾಸ ಅಂದ್ರೆ ಇಂಗ್ಲೆಂಡ್ ಗೆಲುವು ಪಾಕಿಸ್ತಾನಕ್ಕೆ ಮುಳುವಾಗುತ್ತೆ. ಮೂರು ಗೆಲುವು ಮೂರು ಸೋಲು ಒಂದು ಮಳೆಯಿಂದ ರದ್ದಾದ ಪಂದ್ಯದಿಂದ ಪಾಕಿಸ್ತಾನ 7 ಪಾಯಿಂಟ್ ಗಳೊಂದಿಗೆ ಆರನೆ ಸ್ಥಾನದಲ್ಲಿದೆ.

ನಾಳೆ ಪಂದ್ಯದಲ್ಲಿ ಭಾರತ ವಿನ್ ಆದ್ರೆ ಇಂಗ್ಲೆಂಡ್‌ ತಂಡ ಸಂಕಷ್ಟಕ್ಕೆ ಸಿಲುಕುತ್ತೆ.8 ಪಾಯಿಂಟ್ ಗಳೊಂದಿಗೆ ನಾಲ್ಕನೆ ಸ್ಥಾನದಲ್ಲೆ ಇರಬೇಕಾಗುತ್ತೆ.ಮುಂದಿನ ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಸ್ಥಾನದಲ್ಲಿ ನಮ್ಮ ತಂಡ ನೋಡುವ ಆಸೆ ಪಾಕಿಸ್ತಾನ ತಂಡದ್ದು.ಇದೇ ಕಾರಣಕ್ಕೆ ಮೊದಲ ಭಾರಿಗೆ ಪಾಕಿಸ್ತಾನ ಅಭಿಮಾನಿಗಳು ಭಾರತಕ್ಕೆ ಜೈ ಹೋ ಅಂತಿದ್ದಾರೆ.