ನಮ್ಮನ್ನು ರೌಡಿಗಳಂತೆ ಟ್ರೀಟ್​ ಮಾಡ್ತಿದ್ದಾರೆ! ಮುಂಬೈ ಪೊಲೀಸ್ ವಿರುದ್ಧ ಸಚಿವ ಜಿಟಿಡಿ ಆಕ್ರೋಶ!!

ಅತೃಪ್ತರನ್ನು ಮನವೊಲಿಸುವುದಕ್ಕಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮುಂಬೈಗೆ ತೆರಳಿರುವ ಸಚಿವ ಜಿ.ಟಿ.ದೇವೇಗೌಡ ಮಹಾರಾಷ್ಟ್ರ ಸರ್ಕಾರದ ವರ್ತನೆ ಹಾಗೂ ಮುಂಬೈ ಪೊಲೀಸರ ದಬ್ಬಾಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ad


ಮುಂಬೈನಲ್ಲಿ ಬಿಟಿವಿನ್ಯೂಸ್ ಜೊತೆ ಎಕ್ಸಕ್ಲೂಸಿವ್​ ಮಾತುಕತೆ ನಡೆಸಿದ ಸಚಿವ ಜಿ.ಟಿ.ದೇವೆಗೌಡ, ಇಂದಿರಾಗಾಂಧಿ ಕಾಲದಲ್ಲಿ ಎರ್ಮೆಜೆನ್ಸಿ ಹೇರಿದ ರೀತಿಯಲ್ಲಿ ಮಹಾರಾಷ್ಟ್ರ ಸರ್ಕಾರ ವರ್ತಿಸುತ್ತಿದೆ. ನಾವು ಹೊಟೇಲ್​ನಲ್ಲಿ ನಿಯಮಬದ್ಧವಾಗಿ ರೂಂ ಬುಕ್​ ಮಾಡಿದ್ದರೂ ಸಹ ಒಳಪ್ರವೇಶಿಸಲು ಅವಕಾಶ ನೀಡದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ನಾವು ನಮ್ಮ ಶಾಸಕರನ್ನು ಭೇಟಿ ಮಾಡಲು ಬಂದಿದ್ದೇವೆ. ನಾವೇನು ವೆಫನ್ಸ್ ತಂದಿಲ್ಲ. ಅಥವಾ ಅವರಿಂದ ಸಹಿ ಹಾಕಿಸಿಕೊಳ್ಳಲು ಯಾವುದೇ ಕಾಗದಪತ್ರ ತಂದಿಲ್ಲ. ಹೀಗಿದ್ದರೂ ನಮ್ಮ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಇದ್ಯಾವ ನೀತಿ ಎಂದು ಜಿಟಿಡಿ ಕಿಡಿಕಾರಿದ್ದಾರೆ.


ಮಹಾರಾಷ್ಟ್ರ ಬಿಜೆಪಿ ಸರ್ಕಾರ ಹಾಗೂ ಮುಂಬೈ ಪೊಲೀಸರ ವರ್ತನೆಯನ್ನು ಪ್ರಧಾನಿ ಮೋದಿಯವರು ಗಮನಿಸಬೇಕು. ಈ ರೀತಿ ವರ್ತಿಸುವುದು ಬಿಜೆಪಿ ಶೋಭೆ ತರುವುದಿಲ್ಲ. ನಾವು ಅತೃಪ್ತರ ಭೇಟಿಗೆ ಬಂದಿದ್ದೇವೆ. ಭೇಟಿ ಬಳಿಕ ಹಿಂತಿರುಗುತ್ತೇವೆ ಅಷ್ಟೇ ಎಂದು ಜಿಟಿಡಿ ಹೇಳಿದ್ದಾರೆ.