ಹುಟ್ಟುಹಬ್ಬದಂದು ಅಂಬಿ ಫ್ಯಾನ್ಸ್​​ಗೆ ತ್ರಿಬಲ್​​ ಧಮಾಕಾ! ಅಮರ್​ ಜೊತೆ ತೆರೆಗೆ ಬರ್ತಿದೆ ಅಂತ!!

ಕನ್ನಡಚಿತ್ರರಂಗದ ರೆಬಲ್ ಸ್ಟಾರ್​, ಅಭಿಮಾನಿಗಳ ಪ್ರೀತಿಯ ಅಂಬಿ ಇಂದು ನಮ್ಮೊಂದಿಗಿಲ್ಲ. ಅವರಿಲ್ಲದ ಅವರ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸ್ಯಾಂಡಲ್​ವುಡ್ ಸಜ್ಜಾಗಿದೆ. ಇನ್ನೇನೂ ಅಂಬರೀಶ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದರ ನಡುವೆ ಕರ್ಣನ ಬರ್ತ್​ಡೇ ಅಭಿಮಾನಿಗಳಿಗೆ ತ್ರಿಬಲ್​ ಧಮಾಕಾ ಸಿಕ್ತಿದೆ. ಅಷ್ಟಕ್ಕೂ ಆ ತ್ರಿಬಲ್ ಧಮಾಕಾ ಏನೂ ಅಂತೀರಾ ನೀವೆ ನೋಡಿ.

adಜೂನಿಯರ್ ರೆಬಲ್ ಸ್ಟಾರ್ ಅಮರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ. ಬೆಳ್ಳಿ ಪರದೆಯ ಮೇಲೆ ಅಭಿಷೇಕ್​​ ನಟನೆಯ ಚೊಚ್ಚಲ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಎಕ್ಸೈಟ್​ ಆಗಿ ಕಾಯ್ತಿದ್ದಾರೆ. ಅದಕ್ಕೆ ಕಾರಣ ಸದ್ಯ ರಿಲೀಸ್​ ಆಗಿರೋ ಚಿತ್ರದ ಬ್ಯೂಟಿಫುಲ್ ಹಾಡುಗಳು ಹಾಗೂ ಟ್ರೈಲರ್​.ಈಗಾಗ್ಲೇ ಅಮರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರಕ್ಕೆ ಸೆನ್ಸಾರ್ ಕೂಡ ಮುಗಿದಿದ್ದು ಯೂ/ಎ ಸರ್ಟಿಫಿಕೇಟ್ ಸಿಕ್ಕಾಗಿದೆ. ಮುಂದಿನ ತಿಂಗಳು 29ರಂದು ಅಂಬಿ ಬರ್ತ್​ಡೇ ಇದೆ. ಹೀಗಾಗಿ ಮೇ 31ರಂದು ಶುಕ್ರವಾರ ಸಿನಿಮಾ ರಿಲೀಸ್​ ಮಾಡೋ ಪ್ಲಾನ್​ ಮಾಡಿದೆ ಚಿತ್ರತಂಡ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಅಂಬಿ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ ಸಿಗಲಿದೆ. ರೆಬಲ್ ಸ್ಟಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಅಂತ ಸಿನಿಮಾ ಕೂಡ ಅಮರ್ ಸಿನಿಮಾದ ಜೊತೆ ರೀ ರಿಲೀಸ್​ ಆಗ್ತಿದೆ.ಅಂದಹಾಗೇ ಅಂತ ಸಿನಿಮಾ ಅಂಬರೀಶ್ ಸಿನಿಜರ್ನಿಯಲ್ಲಿ ಹೊಸ ಟರ್ನಿಂಗ್ ಕೊಟ್ಟ ಚಿತ್ರ. ರೆಬಲ್ ಸ್ಟಾರ್ ಡಬ್ಬಲ್ ರೋಲ್​ನಲ್ಲಿ ಮಿಂಚಿದ್ದ ಸಿನಿಮಾ. ಕನ್ವರ್​ ಲಾಲ್​ ಅನ್ನೋ ಪಾತ್ರ ಮಾಡಿದ್ದ ಅಂಬಿ ಅಭಿಮಾನಿಗಳ ಮನಸಿನಲ್ಲಿ ಅಚ್ಚಳಿಯದ ಛಾಪು ಒತ್ತಿದ್ರು. ಅಂಬರೀಶ್​ ಜೊತೆ ಲಕ್ಷ್ಮೀ ಹಾಗೂ ಲತಾ ಸ್ಕ್ರೀನ್​ಶೇರ್ ಮಾಡಿಕೊಂಡಿದ್ರು.

 

ಅಂದು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿ, ಸಿನಿರಸಿಕರನ್ನ ರಂಜಿಸಿದ್ದ ಅಂತ ಈಗ ಹೊಸ ಡಿಜಿಟಲ್ ಫಾರ್ಮೆಟ್​​ನೊಂದಿಗೆ ಮತ್ತೆ ಥಿಯೇಟರ್​ಗೆ ಎಂಟ್ರಿ ಕೊಡ್ತಿದ್ದಾನೆ. ಅತ್ತ, ಅಭಿಷೇಕ್ ಮೊದಲ ಸಿನಿಮಾ ಅಮರ್ ಕೂಡ ಅದೇ ದಿನ ರಿಲೀಸ್ ಆಗ್ತಿದೆ. ಈ ನಡುವೆ ಅಂಬಿ ಹುಟ್ಟುಹಬ್ಬ ಕೂಡ ಇದೆ. ಒಟ್ನಲ್ಲಿ ರೆಬೆಲ್​ ಫ್ಯಾನ್ಸ್​ಗೆ ತ್ರಿಬಲ್​ ಧಮಾಕ.