ಭಾರತದ ವಿರುದ್ಧ ಸೋತಿದ್ದಕ್ಕೆ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ ಪಾಕ್ ಕೋಚ್​!! ಬಯಲಾಯ್ತು ಶಾಕಿಂಗ್​ ಸುದ್ದಿ!!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸತತ ಸೋಲುಗಳನ್ನು ಅನುಭವಿಸುತ್ತಿದ್ದು, ಭಾರತದ ವಿರುದ್ಧದ 7 ನೇ ಪಂದ್ಯದಲ್ಲೂ ಪಾಕ್​ ಪಡೆ ಸೋಲು ಅನುಭವಿಸಿತ್ತು. ಈ ಸೋಲಿಗೆ ಕೋಚ್​​ ತಲೆದಂಡ ತೆರಲು ಸಿದ್ಧವಾಗಿದ್ದು, ಭಾರತ ವಿರುದ್ಧ ಸೋತಿದ್ದಕ್ಕೆ ಪಾಕ್ ಕೋಚ್​ ಆತ್ಮಹತ್ಯೆಗೂ ಚಿಂತಿಸಿದ್ದರು ಎಂಬ ಆಘಾತಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

ad

ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಜಯ ಸಾದಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಇಂತಹದೊಂದು ಆಘಾತಕಾರಿ ಅಂಶವನ್ನು  ಪಾಕಿಸ್ತಾನ ಕೋಚ್ ಮಿಕ್ಕಿ  ಬಹಿರಂಗಪಡಿಸಿದ್ದಾರೆ.

ಭಾರತದ ವಿರುದ್ಧ ಪಂದ್ಯದಲ್ಲಿ ಸೋತಿದಕ್ಕೆ ಬಹಳ ಅವಮಾನ ಅನುಭವಿಸಿದ್ದು, ಈ ಒತ್ತಡದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದೆ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.ಹೌದು ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋಲನ್ನು ಅನುಭವಿಸಿ ತನ್ನ ಸೋಲಿನ ದಾಖಲೆಗಳನ್ನು ಮುಂದುವರಿಸಿತ್ತು. ಜೊತೆಗೆ ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಪಾಕಿಸ್ತಾನದ ತಂಡದ ನಾಯಕ ಮತ್ತು ಕೋಚ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ  ಟೀಕಿಸಿದ್ದರು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್​ಗೆ ಹೋದ ಘಟನೆಯೂ ನಡೆದಿತ್ತು.

ಇನ್ನೂ ನಿನ್ನೆ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ ಪಾಕಿಸ್ತಾನ ವಿಶ್ವಕಪ್ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಎಂದು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಕೋಚ್ ಮಿಕ್ಕಿ ತಿಳಿಸಿದ್ದಾರೆ.

‘ವಿಶ್ವಕಪ್ ನಲ್ಲಿ ನಾವು ಸೋಲಿನ ಮೇಲೆ ಸೋಲು ಕಾಣುತ್ತಿದ್ದು, ಅಭಿಮಾನಿಗಳಿಂದ ತುಂಬಾನೇ ಟೀಕೆಗೆ ಒಳಗಾಗಿದ್ದೇವು. ಈ ನಡುವೆ ವಿಶ್ವ ಕಪ್ ಪಂದ್ಯದಲ್ಲಿ ಭಾರತದ ವಿರುದ್ಧದ ಪಂದ್ಯ ನಮಗೆ ಬಹಳ ಮುಖ್ಯವಾಗಿತ್ತು. ಆದರೆ ಅಂತಹ ಪ್ರಮುಖ ಪಂದ್ಯದಲ್ಲಿಯೇ ನಾವು ಸೋತೆವು, ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದೇವು, ಇದರಿಂದ ನಾನು ತುಂಬಾ ಅವಮಾನ ಅನುಭವಿಸಿ ಒತ್ತಡ, ಇಕ್ಕಟ್ಟಿಗೆ ಸಿಲುಕಿದೆ, ಅಷ್ಟಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೂ ಸಹ ಬಂದಿದ್ದೆ. ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.