ನಾವು ಬಂದಿರೋದು ಸೇವೆ ಮಾಡೋಕ್ಕಲ್ಲ- ರಾಜಕಾರಣ ಮಾಡೋಕೆ- ಮತ್ತೊಮ್ಮೆ ವಿವಾದ ಸೃಷ್ಟಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ!

 

ad

ಸಂವಿಧಾನ ತಿದ್ದುವ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಜಕಾರಣಿಗಳು ಮಾಡ್ತಿರೋದು ಏನು? ಅನ್ನೋದರ ಬಗ್ಗೆ ಅನಂತಕುಮಾರ್ ಹೇಳಿಕೆ ಇದೀಗ ಸಖತ್ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ನಾವು ರಾಜಕಾರಣಿಗಳಾಗಿರೋದೇ ರಾಜಕಾರಣ ಮಾಡೋಕೆ ಎನ್ನುವ ಮೂಲಕ ಅನಂತಕುಮಾರ್ ಹೆಗಡೆ ತಮ್ಮ ಎಂದಿನ ಉಡಾಫೆ ಶೈಲಿಯಲ್ಲಿ ಮಾತನಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹೆಗಡೆ, ಯಾರೋ ಕೇಳಬಹುದು ನಿವ್ ರಾಜಕಾರಣ ಮಾಡ್ತೀರಾ ಅಂತಾ ನಾವು ಈ ಜಾಗದಲ್ಲಿ ಬಂದು ಕುಳಿತದ್ದು ಸೇವೆ ಮಾಡೋದಿಕ್ಕಲ್ಲ. ಇಲ್ಲಿ ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ ಎಂದಿದ್ದಾರೆ. ಅಂತಾ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಉಡಾಪೆ ಹೇಳಿಕೆ ನೀಡಿದ್ದಾರೆ.
ನಾವು ರಾಜಕಾರಣಕ್ಕೆ ಬಂದಿರೋದ್ರಿಂದಲೇ ಎಂಪಿ, ಎಮ್​ಎಲ್​ಎ ಆಗಿರೋದು. ರಾಜಕಾರಣ ಬಿಟ್ಟು ಬೇರೆನು ಮಾಡಲಿಕ್ಕೆ ಬರುವುದಿಲ್ಲ. ರಾಜಕಾರಣವನ್ನೇ ಮಾಡ್ತೇವೆ. ಮಾಧ್ಯಮದವರು ಹೇಗೆ ಬರೆದುಕೊಳ್ತಿರೊ ಹಾಗೇ ಬರ್ಕೋಳಿ ಎಂದು ಹೇಳುವ ಮೂಲಕ ಮತ್ತೆ ವಿವಾಧವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ‌. ಲೋಕಸಭಾ ಚುನಾವಣೆ ಹತ್ತಿರ ಇರೋ ಸಮಯದಲ್ಲೆ ಇಂತಹ ಹೇಳಿಕೆ ನೀಡಿರೋದು ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾವ ರೀತಿ ಪಾಠ ಕಲಿಸ್ತಾರೆ ಅಂತಾ ಕಾದ ನೋಡಬೇಕಿದೆ.