‘ಮಾಯಾವತಿ ಅವರನ್ನ ಪ್ರಧಾನಿ ಮಾಡುವ ಕೆಲಸದಲ್ಲಿ ಇದು ನನ್ನ ಸಣ್ಣ ಪ್ರಯತ್ನ’ – ಪವನ್ ಕಲ್ಯಾಣ್

ಲೋಕಸಭೆ ಚುನಾವಣೆಗೆ ಡೇಟ್ ಅನೌನ್ಸ್ ಆಗ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಗೆಲುವಿನ ಲೆಕ್ಕಾಚಾರಗಳು ಶುರುವಾಗಿದೆ. ಈ ಮಧ್ಯೆ ಮಾಯಾವತಿ ಜೊತೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೈಜೋಡಿಸಿದ್ದಾರೆ.

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಬಿಎಸ್​ಪಿ ಹಾಗೂ ಜನಸೇನಾ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಉತ್ತರಪ್ರದೇಶದ ಲಖನೌನಲ್ಲಿ ಮಾಯಾವತಿಯವರನ್ನ ಭೇಟಿಯಾದ ಪವನ್ ಕಲ್ಯಾಣ್, ಮೈತ್ರಿ ಮಾತುಕತೆ ನಡೆಸಿದ್ದಾರೆ.

ಮೈತ್ರಿ ಮಾಡಿಕೊಂಡ ಬಳಿಕ ಮಾತನಾಡಿದ ಪವನ್ ಕಲ್ಯಾಣ್, ಮಾಯಾವತಿ ಅವರನ್ನ ಪ್ರಧಾನಿ ಮಾಡುವ ಕೆಲಸದಲ್ಲಿ ಇದು ನನ್ನ ಸಣ್ಣ ಪ್ರಯತ್ನ ಎಂದು ಹೇಳಿದ್ದಾರೆ. ಇನ್ನು ಮಾಯಾವತಿ ಮಾತನಾಡಿ, ಪವನ್ ಕಲ್ಯಾಣ್ ಆಂಧ್ರಪ್ರದೇಶ ಸಿಎಂ ಆಗೋದನ್ನ ನೋಡಬೇಕು ಎಂದು ಹೇಳಿದ್ದಾರೆ