ಪತಿಯಿಂದ ಪತ್ನಿಯ ಬರ್ಭರ ಹತ್ಯೆ

 

ಕುಡಿದ ಮತ್ತಿನಲ್ಲಿ ಪತ್ನಿಯ ತಲೆಗೆ ಪತಿ ಕಬ್ಬಿಣದ ಹಾರಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಹೊರವಲಯದ ಹೀರಾಪುರ ಗ್ರಾಮದಲ್ಲಿ ನಡೆದಿದೆ… ಸವಿತಾ (35) ಪತಿಯಿಂದಲೇ ಕೊಲೆಯಾದ ದುದೈವಿ… ಕೂಲಿ ಕೆಲಸ ಮಾಡುತ್ತಿದ್ದ ಪತಿ ಸಂತೋಷ್ ಪ್ರತಿನಿತ್ಯ ಕುಡಿದು ಬಂದು ಗಾಂಜಾ ಸೇವಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದನಂತೆ. ಕಳೆದ ರಾತ್ರಿ ಕೂಡ ಪತ್ನಿ ಜೊತೆ ಜಗಳ ಆಡುತ್ತಿರುವ ವಿಷ್ಯವನ್ನ ತಿಳಿದ ಸವಿತಾಳ ಸಂಬಂಧಿಕರು ಬಂದು ಸಂಧಾನ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಕುಡಿದ ಮತ್ತಿನಲ್ಲಿದ್ದ ಪತಿ ಸಂತೋಷ್, ಮನೆಯಲ್ಲಿದ್ದ ಕಬ್ಬಿಣದ ಹಾರಿಯಿಂದ ಪತ್ನಿ ಸವಿತಾಳ ತಲೆಗೆ ಬಲವಾಗಿ ಹೊಡೆದಿದಾನೆ. ಈ ವೇಳೆ ಪತ್ನಿಯ ತಲೆ ಛಿದ್ರ ಛಿದ್ರವಾಗಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಘಟನೆ ನಂತರ ಆರೋಪಿ ಸಂತೋಷ್ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಕೊಲೆಯಾದ ಸವಿತಾಳ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಿದಾರೆ. ಪ್ರಕರಣವನ್ನ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

Avail Great Discounts on Amazon Today click here