ದಸರಾ ರೇಸ್​ನಲ್ಲಿ ಭಾಗವಹಿಸ್ತಾರಾ ದಚ್ಚು? – ಗ್ರಾವೆಲ್​ ಫೆಸ್ಟ್​ ಲೈಸೆನ್ಸ್​ ಪಡೆದುಕೊಂಡ ದರ್ಶನ!

ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಗ್ರಾವೆಲ್ ಫೆಸ್ಟ್ 2018 ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಸನ್ಸ್ ಪಡೆದುಕೊಂಡಿದ್ದಾರೆ. ಹೌದು, ಕಾರು ಅಪಘಾತದಲ್ಲಿ ಕೈ ಮುರಿದಿರೋದ್ರಿಂದ ದರ್ಶನ್ ಕಾರು ರ್ಯಾಲಿಯಲ್ಲಿ ಪಾಲ್ಗೊಳ್ಳೋದಿಲ್ಲ ಎನ್ನಲಾಗ್ತಿತ್ತು. ಕೈ ಶಸ್ತ್ರ ಚಿಕಿತ್ಸೆ ನಡುವೆಯೂ ಅಕ್ಟೋಬರ್ 7ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯೋ ಕಾರು ರೇಸ್ ನಲ್ಲಿ ಭಾಗವಹಿಸಲು ದರ್ಶನ್ ಲೈಸನ್ಸ್ ಪಡೆದುಕೊಂಡಿದ್ದಾರೆ.ಹಿಂದಿನಿಂದಲೂ ಕಾರ್ ರೇಸ್ ಕ್ರೇಜ್ ಹೊಂದಿದ್ದ ನಟ ದರ್ಶನ್ ಈ ಬಾರಿಯ ದಸರಾ ಗ್ರಾವೆಲ್ ಫೆಸ್ಟ್ 2018ರ ಕಾರ್ ರೇಸ್ ಗೆ ಭರ್ಜರಿ ತಯಾರಿ ಕೂಡ ನಡೆಸಿದ್ರು. ಈ ನಡುವೆ ಕಳೆದ ವಾರ ನಡೆದ ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡು 6 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದರು. ಈ ನಡುವೆಯೂ ದರ್ಶನ್ ಕಾರು ರೇಸ್ ನಲ್ಲಿ ಭಾಗವಹಿಸಲು ಲೈಸೆನ್ಸ್ ಪಡೆದುಕೊಂಡಿರೋದು ದಚ್ಚು ಅಭಿಮಾನಿಗಳು, ಕಾರು ರೇಸ್ ಪ್ರಿಯರ ಸಂಭ್ರಮವನ್ನ ಇಮ್ಮಡಿಗೊಳಿಸಿದೆ.

ad


ಆದ್ರೆ ಕೆಲವರ ಪ್ರಕಾರ ಈ ಹಿಂದೆಯೇ ದರ್ಶನ್ ಲೈಸೆನ್ಸ್ ಬಯಸಿ ಅರ್ಜಿ ಸಲ್ಲಿಸಿದ್ರು. ತಡವಾಗಿ ಲೈಸೆನ್ಸ್ ಸಿಕ್ಕಿದೆ. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿರೋದ್ರಿಂದ ಕಾರ್ ರೇಸ್ ನೋಡಬಹುದೇ ವಿನಃ ಸ್ಪರ್ಧೆಯಲ್ಲಿ ಭಾಗವಹಿಸೋದು ಡೌಟು ಅಂತಿದ್ದಾರೆ.