ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ- ನಾಡದೇವತೆಗೆ ಪುಷ್ಪಾರ್ಚನೆಗೈಯ್ದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ!

 

ad

ವಿಶ್ವವಿಖ್ಯಾತ ಮೈಸೂರು ದಸರಾ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಆರಂಭಗೊಂಡಿದ್ದು, ಇನ್ಪೋಸಿಸ್​ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಸಿಎಂ ಕುಮಾರಸ್ವಾಮಿ ನಾಡಹಬ್ಬ ದಸರಾಗೆ ಚಾಲನೆ ನೀಡಿದ್ದಾರೆ. ಬೆಳ್ಳಿರಥದಲ್ಲಿ ಇರಿಸಲಾದ ದೇವಿಗೆ ಸುಧಾಮೂರ್ತಿ, ಸಿಎಂ ಕುಮಾರಸ್ವಾಮಿ, ಸಂಸದ ಪ್ರತಾಪ ಸಿಂಹ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ನಡೆಸುವ ಮೂಲಕ ಚಾಲನೆ ನೀಡಿದರು.
ಇಂದಿನಿಂದ ಆರಂಭವಾಗಿರುವ ದಸರಾದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದು, ವಿವಿಧ ಬಗೆಯ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು ನಾಡಹಬ್ಬದ ಅಂದ ಹೆಚ್ಚಿಸಲಿವೆ. ವಿಶ್ವದ ನಾನಾ ಭಾಗದಿಂದ ಲಕ್ಷಾಂತರ ಜನರು ದಸರಾದಲ್ಲಿ ಭಾಗಿಯಾಗಲಿದ್ದು, ಜಂಬೂಸವಾರಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.

  
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಧಾಮೂರ್ತಿ,ದಸರಾ ಉದ್ಘಾಟನೆ ನನ್ನಂಥ ಸಾಮಾನ್ಯರಿಗೆ ಸಿಕ್ಕಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದರು. ಸಿಎಂ ಕುಮಾರಸ್ವಾಮಿ ಮಾತನಾಡಿ, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರವನ್ನು ನಂಬಿ ನಾನು ನಿಮ್ಮ ನೆರವಿಗಾಗಿ ಹಲವು ಯೋಜನೆ ರೂಪಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ ಎಂದರು. ಒಟ್ಟಿನಲ್ಲಿ 10 ದಿನಗಳ ಕಾಲ ನಡೆಯುವ ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಇಂದು ಸಂಭ್ರಮದ ​ ಚಾಲನೆ ದೊರೆತಿದ್ದು, ಜನರಲ್ಲಿ ಉತ್ಸವದ ವಾತಾವರಣ ಮನೆಮಾಡಿದೆ.