ಮೇ 21 ರಂದು ಏನಾಗುತ್ತೆ ? ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದು ಯಾಕೆ ?

ಮೇ 23 ರ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರಕಾರ ಉರುಳುತ್ತೆ ಎಂದು ಬಿಜೆಪಿ ಹೇಳುತ್ತಲೇ ಬಂದಿತ್ತು. ಅದಕ್ಕೆ ಪೂರ್ವಭಾವಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಿದ್ದತಾ ಸಭೆ ನಡೆಸಲಿದ್ದಾರೆಯೇ ? ಹೌದು ಎನ್ನುತ್ತವೆ ಬಿಜೆಪಿ ಮೂಲಗಳು.

ad

ಲೋಕಸಭಾ ಚುನಾವಣಾ ಫಲಿತಾಂಶ ಇರೋದು ಮೇ 23 ರಂದು. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವು ಎಷ್ಟು ಸ್ಥಾನಗಳನ್ನು ಗಳಿಸುತ್ತದೆ ಎಂಬುದನ್ನು ನೋಡಿದ ಬಳಿಕ ರಾಜ್ಯ ರಾಜಕಾರಣದ ಬದಲಾವಣೆಗೆ ಬಿಜೆಪಿ ಕೈ ಹಾಕುವುದು ಸಹಜವಾಗಿತ್ತು. ಆದರೆ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಮೇ 21 ಕ್ಕೇ ಶಾಸಕರ ಸಭೆ ಕರೆದಿದೆ.

ಮೇ 21ರಂದೇ ಸಭೆಗೆ ಬರುವಂತೆ ಶಾಸಕರುಗಳಿಗೆ ಯಡಿಯೂರಪ್ಪ ಬುಲಾವ್ ಕೊಟ್ಟಿದ್ದು, ಲೋಕ ಫಲಿತಾಂಶ, ಸರ್ಕಾರ ರಚನೆ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಯಿದೆ. ಆಪರೇಷನ್ ಹಸ್ತಕ್ಕೆ ಒಳಗಾಗದಂತೆ ಯಡಿಯೂರಪ್ಪ ಎಚ್ಚರಿಸಲಿದ್ದು, ಬಿಎಸ್ವೈ ನಡೆ ಭಾರೀ ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣಾ ಫಲಿತಾಂಶ ಏನೇ ಬಂದರೂ ಅಪರೇಷನ್ ಕಮಲವನ್ನು ಯಾವ ರೀತಿ ಮಾಡಬೇಕು ? ಯಾವ ಯಾವ ಶಾಸಕರು ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಮಾಸ್ಟರ್ ಪ್ಲ್ಯಾನ್ ನಡೆಯಲಿದೆ.