ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ರಾ ಕಮಲ್‌ಹಾಸನ ?

Actor Kamal Haasan Beats His Fan at Bengaluru.
Actor Kamal Haasan Beats His Fan at Bengaluru.

ಚಿತ್ರರಂಗದ ನಟ-ನಟಿಯರು, ಸೆಲೆಬ್ರೆಟಿಗಳು ಅಭಿಮಾನಿಗಳ ಮೇಲೆ ಕೋಪಿಸಿಕೊಳ್ಳೋದು ಸಾಮಾನ್ಯ. ಆದರೆ ಬಹುಭಾಷಾ ನಟ ಕಮಲ ಹಾಸನ್​​ ಅಭಿಮಾನಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ ಇದೀಗ ವಿವಾದಕ್ಕೆ ಕಾರಣವಾಗಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಬಂದಿದ್ದ ಕಮಲ್​​ ಹಾಸನ್​​​ ಅವರನ್ನು ಅಭಿಮಾನಿಯೊಬ್ಬ ಮಾತನಾಡಿಸಲು ಯತ್ನಿಸಿದ್ದಾನೆ. ಅಭಿಮಾನಿಯ ಈ ಅತಿರೇಕದ ವರ್ತನೆಗೆ ಕಮಲ್ ಹಾಸನ ಸಿಟ್ಟಾಗಿದ್ದು, ಅಭಿಮಾನಿಯನ್ನು ತಳ್ಳಿ ಆತನಿಗೆ ಕಪಾಳ ಮೋಕ್ಷ್​ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದ್ದು, ಈ ಘಟನೆ ನಡೆದ ವೇಳೆ ನಟ ರಮೇಶ್ ಅರವಿಂದ್ ಕೂಡ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ.

 Actor Kamal Haasan Beats His Fan at Bengaluru.
Actor Kamal Haasan Beats His Fan at Bengaluru.

ಆದರೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಮಲ್ ಹಾಸನ್ ಆಪ್ತ ಸಹಾಯಕರು ನಿರಾಕರಿಸಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಕಮಲ್ ಹಾಸನ್ ಭೇಟಿಗೆ ಬಂದಿದ್ದು ನಿಜ. ಆದರೇ ಕಮಲ್ ಹಾಸನ್ ಯಾರನ್ನು ತಳ್ಳಿಲ್ಲ. ಯಾರ ಮೇಲೂ ಹಲ್ಲೆ ಮಾಡಿಲ್ಲ. ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

 Actor Kamal Haasan Beats His Fan at Bengaluru.
Actor Kamal Haasan Beats His Fan at Bengaluru.

ಆದರೇ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇನ್ನೊಂದೆಡೆ ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋದರಿಂದ ಅವರ ತೇಜೋವಧೆ ಮಾಡಲು ಈ ಪ್ರಯತ್ನ ನಡೆದಿದೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಕಪಾಳ ಮೋಕ್ಷದ ವಿಡಿಯೋ ಸಾಕಷ್ಟು ಸಂಚಲನ ಮೂಡಿಸಿದೆ