ಹ್ಯಾಟ್ರಿಕ್ ಹೀರೋಗೆ ಟ್ರಾಫಿಕ್ ಸಮಸ್ಯೆ ! ಗೃಹ ಸಚಿವರ ಮೊರೆ ಹೋದ ಶಿವಣ್ಣ ದಂಪತಿ!!

ಮಾನ್ಯತಾ ಟೆಕ್ ಪಾರ್ಕ್​್​ಗೆ ತೆರಳುವ ವಾಹನಗಳಿಂದ ನಾಗವಾರ ಸುತ್ತ-ಮುತ್ತಲಿನ ನಿವಾಸಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ನಾಗವಾರದ ನಿವಾಸಿಯಾಗಿರುವ ನಟ ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜಕುಮಾರ್ ಜೊತೆ ವಿಧಾನಸೌಧಕ್ಕೆ ತೆರಳಿ ಸಚಿವ ರಾಮಲಿಂಗಾ ರೆಡ್ಡಿಯನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು.
ಮಾನ್ಯತಾ ಟೆಕ್ ಪಾರ್ಕ್ ನಿರ್ಮಾಣದ ವೇಳೆಯಲ್ಲಿ ಟೆಕ್​ ಪಾರ್ಕ್​ಗೆ ಹೋಗುವ ವಾಹನಗಳಿಗೆ ನಾಗವಾರದ ರೆಸಿಡೆನ್ಸಿ ರಸ್ತೆಯಿಂದ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಹೇಳಲಾಗಿತ್ತು. ಆದರೇ ಇದೀಗ ಸಾವಿರಾರು ಸಿಬ್ಬಂದಿ ಇದೇ ಜಾಗದಿಂದ ಸಂಚರಿಸುವುದರಿಂದ ಸಮಸ್ಯೆ ಉಂಟಾಗಿದೆ. ಪ್ರತಿನಿತ್ಯ ಒಂದೂವರೆ ಲಕ್ಷ ಸಿಬ್ಬಂದಿ ಮಾನ್ಯತಾ ಟೆಕ್ ಪಾರ್ಕ್​ನಲ್ಲಿ ಕೆಲಸ ಮಾಡುತ್ತಿರುವುದರಿಂದ 5 ಸಾವಿರಕ್ಕೂ ಹೆಚ್ಚು ವಾಹನಗಳು ಟೆಕ್ ಪಾರ್ಕ್ ಬರುತ್ತಿದೆ ಹೀಗಾಗಿ ತುಂಬ ಸಮಸ್ಯೆ ಉಂಟಾಗುತ್ತಿದೆ ಎಂದು ಶಿವರಾಜಕುಮಾರ ಸೇರಿದಂತೆ ಹಲವರು ರಾಮಲಿಂಗಾ ರೆಡ್ಡಿ ಎದುರು ಅಹವಾಲು ತೋಡಿಕೊಂಡರು.

ಗೃಹ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಬಳಿಕ ಮಾತನಾಡಿದ  ನಟ  ಶಿವರಾಜಕುಮಾರ್, ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ನಿಂದ ತೊಂದರೆ ಯಾಗುತ್ತಿದೆ. ಹಾಗಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದೆವೆ. ೩೦ ಸಾವಿರ ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು . ಆದ್ರೆ ಈಗ ೧ ಲಕ್ಷ ೫೦ ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆಯಾಗುತ್ತಿದೆ. ರಾಮಲಿಂಗಾರಡ್ಡಿಯವರ ಗಮನಕ್ಕೆ ತರಲಾಗಿದೆ. ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.